alex Certify 2 ತಿಂಗಳುಗಳ ಬಳಿಕ ನ್ಯೂಜಿಲೆಂಡ್​ನಲ್ಲಿ 1 ಕೊರೊನಾ ಪ್ರಕರಣ ವರದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2 ತಿಂಗಳುಗಳ ಬಳಿಕ ನ್ಯೂಜಿಲೆಂಡ್​ನಲ್ಲಿ 1 ಕೊರೊನಾ ಪ್ರಕರಣ ವರದಿ

ಬರೋಬ್ಬರಿ 2 ತಿಂಗಳುಗಳ ಬಳಿಕ ನ್ಯೂಜಿಲೆಂಡ್​ನಲ್ಲಿ ಒಂದು ಕೊರೊನಾ ಪಾಸಿಟಿವ್​ ಪ್ರಕರಣ ವರದಿಯಾಗಿದೆ. ವಿದೇಶದಿಂದ ಮರಳಿದ್ದ ಈಕೆಗೆ ನಿಕಟ ಸಂಪರ್ಕ ಹೊಂದಿದ್ದವರಿಂದ ಸೋಂಕು ಹರಡಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಏಕೆಂದರೆ ವಿದೇಶದಿಂದ ವಾಪಸ್ಸಾಗಿದ್ದ ವೇಳೆ ಈಕೆಯ ಕೊರೊನಾ ವರದಿ ನಗೆಟಿವ್ ಬಂದಿತ್ತು.

ಡಿಸೆಂಬರ್​ 30ರಂದು ಸೋಂಕಿತ ಮಹಿಳೆ ನ್ಯೂಜಿಲೆಂಡ್​ಗೆ ವಾಪಸ್ಸಾಗಿದ್ದರು. ಎರಡು ವಾರಗಳ ಕಾಲ ಕಡ್ಡಾಯ ಕ್ವಾರಂಟೈನ್​ನಲ್ಲಿದ್ದ ಮಹಿಳೆಗೆ 2 ಬಾರಿ ಕೊರೊನಾ ವರದಿ ನೆಗೆಟಿವ್ ಬಂದಿತ್ತು ಎಂದು ನ್ಯೂಜಿಲೆಂಡ್​ ಸಚಿವ ಕ್ರಿಸ್​ ಹಿಪ್ಕಿನ್ಸ್ ಹೇಳಿದ್ದಾರೆ.

ಸೋಂಕಿತ ಮಹಿಳೆಯ ಜೊತೆ ಸಂಪರ್ಕದಲ್ಲಿದ್ದ 15 ಮಂದಿಯನ್ನ ಐಸೋಲೇಶನ್​ನಲ್ಲಿ ಇಡಲಾಗಿದೆ. ಬಹುಶಃ ಈಕೆಗೆ ಕ್ವಾರಂಟೈನ್​ನಲ್ಲಿದ್ದ ವೇಳೆಯೇ ಯಾರಿಂದಲೋ ಸೋಂಕು ತಾಗಿರಬಹುದೆಂದು ಅಂದಾಜಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...