ಬರೋಬ್ಬರಿ 2 ತಿಂಗಳುಗಳ ಬಳಿಕ ನ್ಯೂಜಿಲೆಂಡ್ನಲ್ಲಿ ಒಂದು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ವಿದೇಶದಿಂದ ಮರಳಿದ್ದ ಈಕೆಗೆ ನಿಕಟ ಸಂಪರ್ಕ ಹೊಂದಿದ್ದವರಿಂದ ಸೋಂಕು ಹರಡಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಏಕೆಂದರೆ ವಿದೇಶದಿಂದ ವಾಪಸ್ಸಾಗಿದ್ದ ವೇಳೆ ಈಕೆಯ ಕೊರೊನಾ ವರದಿ ನಗೆಟಿವ್ ಬಂದಿತ್ತು.
ಡಿಸೆಂಬರ್ 30ರಂದು ಸೋಂಕಿತ ಮಹಿಳೆ ನ್ಯೂಜಿಲೆಂಡ್ಗೆ ವಾಪಸ್ಸಾಗಿದ್ದರು. ಎರಡು ವಾರಗಳ ಕಾಲ ಕಡ್ಡಾಯ ಕ್ವಾರಂಟೈನ್ನಲ್ಲಿದ್ದ ಮಹಿಳೆಗೆ 2 ಬಾರಿ ಕೊರೊನಾ ವರದಿ ನೆಗೆಟಿವ್ ಬಂದಿತ್ತು ಎಂದು ನ್ಯೂಜಿಲೆಂಡ್ ಸಚಿವ ಕ್ರಿಸ್ ಹಿಪ್ಕಿನ್ಸ್ ಹೇಳಿದ್ದಾರೆ.
ಸೋಂಕಿತ ಮಹಿಳೆಯ ಜೊತೆ ಸಂಪರ್ಕದಲ್ಲಿದ್ದ 15 ಮಂದಿಯನ್ನ ಐಸೋಲೇಶನ್ನಲ್ಲಿ ಇಡಲಾಗಿದೆ. ಬಹುಶಃ ಈಕೆಗೆ ಕ್ವಾರಂಟೈನ್ನಲ್ಲಿದ್ದ ವೇಳೆಯೇ ಯಾರಿಂದಲೋ ಸೋಂಕು ತಾಗಿರಬಹುದೆಂದು ಅಂದಾಜಿಸಲಾಗಿದೆ.