ಹೆಚ್ಚುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ನ್ಯೂಯಾರ್ಕ್ ಗವರ್ನರ್ ಆಂಡ್ರಿವ್ ಕ್ಯೂಮೋ ಬಾರ್, ರೆಸ್ಟಾರೆಂಟ್ ಹಾಗೂ ಜಿಮ್ಗಳು ರಾತ್ರಿ 10 ಗಂಟೆಗೆ ಬಂದ್ ಆಗಬೇಕು ಅಂತಾ ಆದೇಶ ಹೊರಡಿಸಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಜಿಮ್ , ಬಾರ್ ಹಾಗೂ ರೆಸ್ಟಾರೆಂಟ್ಗಳಲ್ಲಿ ವೈರಸ್ ಹರಡುವ ಸಾಧ್ಯತೆ ಇನ್ನಷ್ಟು ದಟ್ಟವಾಗಿದೆ. ಹೀಗಾಗಿ ಶುಕ್ರವಾರದಿಂದ ಎಲ್ಲ ಜಿಮ್, ಬಾರ್ ಹಾಗೂ ರೆಸ್ಟಾರೆಂಟ್ಗಳು ರಾತ್ರಿ 10 ಗಂಟೆಗೆ ಬಂದ್ ಆಗಲೇಬೇಕು ಅಂತಾ ಗವರ್ನರ್ ಹೇಳಿದ್ದಾರೆ.
ಇನ್ನು ಈ ವಿಚಾರವಾಗಿ ಟ್ವೀಟಾಯಿಸಿದ ನ್ಯೂಯಾರ್ಕ್ ಸಿಟಿಯ ಮೇಯರ್ ಬಿಲ್ ಡಿ ಬ್ಲಾಸಿಯೋ ನ್ಯೂಯಾರ್ಕ್ನಲ್ಲಿ ಕೊರೊನಾ 2ನೇ ಹಂತ ನಿಯಂತ್ರಿಸಲು ಇದು ಕೊನೆಯ ಪ್ರಯತ್ನವಾಗಿದೆ ಅಂತಾ ಬರೆದಿದ್ದಾರೆ.