ಕೋವಿಡ್ 19 ಸೋಂಕು ದೃಢೀಕರಣ ಪರೀಕ್ಷೆಗಾಗಿ ವಿಜ್ಞಾನಿಗಳು ಸಿಆರ್ಎಸ್ಪಿಆರ್ ಆಧಾರಿತ ಹೊಸ ತಂತ್ರಜ್ಞಾನವನ್ನ ಅಭಿವೃದ್ಧಿಪಡಿಸಿದ್ದಾರೆ. ಸ್ಮಾರ್ಟ್ ಫೋನ್ ಕ್ಯಾಮರಾ ಬಳಸಿಕೊಂಡು 30 ನಿಮಿಷಗಳಲ್ಲಿ ಈ ಅಪ್ಲಿಕೇಶನ್ ನಿಖರ ಫಲಿತಾಂಶ ನೀಡಲಿದೆ.
ಸೆಲ್ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ ಈ ತಂತ್ರಜ್ಞಾನವು ನಿಮಗೆ ಕೊರೊನಾ ಪಾಸಿಟಿವ್ ಇಲ್ಲವೇ ನೆಗೆಟಿವ್ ಫಲಿತಾಂಶದ ಬಗ್ಗೆ ಮಾಹಿತಿ ನೀಡಲ್ಲ. ಆದರೆ ಇದು ನಿರ್ದಿಷ್ಟ ಮಾದರಿಯಲ್ಲಿ ವೈರಸ್ ಸಾಂದ್ರತೆಯನ್ನ ಅಳೆಯುತ್ತದೆ.
ಸಿಆರ್ಎಸ್ಪಿಆರ್ ಆಧಾರಿಯ ಡಯಾಗ್ನೋಸ್ಟಿಕ್ಸ್ ಬಗ್ಗೆ ನಾವು ಉತ್ಸುಕರಾಗಲು ಕಾರಣವೇನೆಂದರೆ ಅಗತ್ಯವಿರುವ ಸಮಯದಲ್ಲಿ ತ್ವರಿತ, ನಿಖರವಾರ ಫಲಿತಾಂಶ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಅಮೆರಿಕ ಗ್ಲ್ಯಾಡ್ಸ್ಟೋನ್ ವಿಶ್ವವಿದ್ಯಾಲಯದ ಹಿರಿಯ ತನಿಖಾಧಿಕಾರಿ ಜೆನ್ನಿಫರ್ ಡೌಡ್ನಾ ಮಾಹಿತಿ ನೀಡಿದ್ರು.