alex Certify ಗರ್ಭಿಣಿ ಎಂಬ ವಿಚಾರವನ್ನ ಮುಚ್ಚಿಟ್ಟ ಮಹಿಳೆ ಪೋಷಕರಿಗೆ ನೀಡಿದ್ದು ಭರ್ಜರಿ ಶಾಕ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿ ಎಂಬ ವಿಚಾರವನ್ನ ಮುಚ್ಚಿಟ್ಟ ಮಹಿಳೆ ಪೋಷಕರಿಗೆ ನೀಡಿದ್ದು ಭರ್ಜರಿ ಶಾಕ್​….!

ತಾನು ಗರ್ಭಿಣಿಯಾಗಿದ್ದೇನೆ ಎಂಬ ವಿಚಾರವನ್ನ ರಹಸ್ಯವಾಗಿಟ್ಟಿದ್ದ ಮಹಿಳೆ ತನಗೆ ಹೆರಿಗೆಯಾದ ಬಳಿಕ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ವಿಡಿಯೋ ಕಾಲ್​ ಮಾಡಿ ಸಪ್ರೈಸ್​ ನೀಡಿದ್ದಾಳೆ. ಈ ವಿಡಿಯೋ ಕಾಲ್​ನಲ್ಲಿ ಮಹಿಳೆ ತಾನು ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಇಂಗ್ಲೆಂಡ್​ನ 41 ವರ್ಷದ ಮಹಿಳೆ ಜ್ಯಾಮಿ ಹ್ಯಾರಿಸ್​ರ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ತಾವು ಗರ್ಭಿಣಿಯಾಗಿರುವ ವಿಚಾರವನ್ನ ಕುಟುಂಬಸ್ಥರು ಹಾಗೂ ಸ್ನೇಹಿತರಿಂದ ರಹಸ್ಯವಾಗಿ ಇಟ್ಟಿದ್ದರು. ಕುಟುಂಬಸ್ಥರಿಗೆ ಇನ್ನಷ್ಟು ತೊಂದರೆ ಕೊಡಬಾರದು ಎಂಬ ಕಾರಣಕ್ಕೆ ಈ ವಿಚಾರವನ್ನ ಮುಚ್ಚಿಟ್ಟಿದ್ದರು. ಹೆರಿಗೆಯಾಗೋದಕ್ಕೂ ನಾಲ್ಕು ತಿಂಗಳು ಮುನ್ನ ಮಹಿಳೆಗೆ ತಾನು ಅವಳಿ ಮಕ್ಕಳನ್ನ ಹೊಂದಿದ್ದೇನೆ ಎಂಬ ವಿಚಾರ ತಿಳಿದಿದೆ.

ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕ ಮಹಿಳೆ ವಿಡಿಯೋ ಕಾಲ್​ ಮೂಲಕ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಈ ಖುಷಿಯ ವಿಚಾರವನ್ನ ಶೇರ್​ ಮಾಡಿದ್ದಾರೆ. ಕುಟುಂಬಸ್ಥರು ಹಾಗೂ ಸ್ನೇಹಿತರ ಖುಷಿಗೆ ಪಾರವೇ ಇರಲಿಲ್ಲ. ಮಹಿಳೆಯ ತಂದೆಯಂತೂ ಖುಷಿಯಿಂದ ಭಾವುಕರಾಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರೀತಿಯನ್ನ ಗಳಿಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...