ತಾನು ಗರ್ಭಿಣಿಯಾಗಿದ್ದೇನೆ ಎಂಬ ವಿಚಾರವನ್ನ ರಹಸ್ಯವಾಗಿಟ್ಟಿದ್ದ ಮಹಿಳೆ ತನಗೆ ಹೆರಿಗೆಯಾದ ಬಳಿಕ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿ ಸಪ್ರೈಸ್ ನೀಡಿದ್ದಾಳೆ. ಈ ವಿಡಿಯೋ ಕಾಲ್ನಲ್ಲಿ ಮಹಿಳೆ ತಾನು ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇಂಗ್ಲೆಂಡ್ನ 41 ವರ್ಷದ ಮಹಿಳೆ ಜ್ಯಾಮಿ ಹ್ಯಾರಿಸ್ರ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ತಾವು ಗರ್ಭಿಣಿಯಾಗಿರುವ ವಿಚಾರವನ್ನ ಕುಟುಂಬಸ್ಥರು ಹಾಗೂ ಸ್ನೇಹಿತರಿಂದ ರಹಸ್ಯವಾಗಿ ಇಟ್ಟಿದ್ದರು. ಕುಟುಂಬಸ್ಥರಿಗೆ ಇನ್ನಷ್ಟು ತೊಂದರೆ ಕೊಡಬಾರದು ಎಂಬ ಕಾರಣಕ್ಕೆ ಈ ವಿಚಾರವನ್ನ ಮುಚ್ಚಿಟ್ಟಿದ್ದರು. ಹೆರಿಗೆಯಾಗೋದಕ್ಕೂ ನಾಲ್ಕು ತಿಂಗಳು ಮುನ್ನ ಮಹಿಳೆಗೆ ತಾನು ಅವಳಿ ಮಕ್ಕಳನ್ನ ಹೊಂದಿದ್ದೇನೆ ಎಂಬ ವಿಚಾರ ತಿಳಿದಿದೆ.
ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕ ಮಹಿಳೆ ವಿಡಿಯೋ ಕಾಲ್ ಮೂಲಕ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಈ ಖುಷಿಯ ವಿಚಾರವನ್ನ ಶೇರ್ ಮಾಡಿದ್ದಾರೆ. ಕುಟುಂಬಸ್ಥರು ಹಾಗೂ ಸ್ನೇಹಿತರ ಖುಷಿಗೆ ಪಾರವೇ ಇರಲಿಲ್ಲ. ಮಹಿಳೆಯ ತಂದೆಯಂತೂ ಖುಷಿಯಿಂದ ಭಾವುಕರಾಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರೀತಿಯನ್ನ ಗಳಿಸುತ್ತಿದೆ.