
ಇದೊಂದು ಅತ್ಯಂತ ಅಪರೂಪದ ಪ್ರಕರಣ ಆಗಿದೆ. ಪ್ರಾಣಿಗಳಲ್ಲಿ ಉಂಟಾಗುವ ವಿಚಿತ್ರ ಬೆಳವಣಿಗೆಯನ್ನ ಕಾರ್ನಿಯಲ್ ಡರ್ಮಾಯ್ಡ್ ಎಂದು ಕರೆಯಲಾಗುತ್ತೆ. ದೇಹದ ನಿರ್ದಿಷ್ಟ ಅಂಗವು ತಪ್ಪಾದ ಸ್ಥಳದಲ್ಲಿ ಬೆಳೆಯುವ ಸಮಸ್ಯೆ ಇದಾಗಿದೆ.
ಈ ರೀತಿ ಕಣ್ಣು ಗುಡ್ಡೆಯ ಮೇಲೆ ಕೂದಲು ಬೆಳೆದಿರೋದು ಈ ಸ್ಥಿತಿಗೆ ಒಂದು ಕೆಟ್ಟ ಉದಾಹರಣೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದುರಾದೃಷ್ಟವಶಾತ್ ಈ ಪ್ರಾಣಿಯನ್ನ ಅಧಿಕಾರಿಗಳು ಸಾಯಿಸಿದ್ದಾರೆ. ಇದು ದೀರ್ಘ ಕಾಲದ ಸೋಂಕಿಗೆ ಒಳಗಾಗಬಹುದೆಂದು ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಇದನ್ನ ಸಾಯಿಸಿದ ಬಳಿಕ ಜಿಂಕೆಯ ತಲೆಯನ್ನ ಆಗ್ನೇಯ ಸಹಕಾರಿ ವನ್ಯಜೀವಿ ರೋಗ ಅಧ್ಯಯನ ಘಟಕಕ್ಕೆ ಕಳುಹಿಸಿಕೊಡಲಾಗಿದೆ.