ನ್ಯೂಯಾರ್ಕ್: ಅಮೆರಿಕಾದ ಮೀಡಿಯಾ ಪರ್ಸನ್, ಮಹಿಳಾ ಉದ್ಯಮಿ ಕೈಲಿ ಜೆನ್ನರ್ ಅವರ ಬಾತ್ ರೂಂ ವಿಚಾರ ಈಗ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ಸಾಕಷ್ಟು ಮಿಮ್ ಗಳು ಜೋಕ್ ಗಳು ಹರಿದಾಡುತ್ತಿವೆ.
ಕೈಲಿ ಜೆನ್ನರ್ ಅವರು ತಮ್ಮ ಕಾಸ್ಮೆಟಿಕ್ಸ್ ಕಚೇರಿಯ ಬಾತ್ ರೂಂನ ಮಾರ್ಬಲ್ ಹಾಗೂ ಶವರ್ ನ ದುರ್ಬಲ ವಾಟರ್ ಪ್ರೆಶರ್ ನ ಫೋಟೋವನ್ನು ಟ್ವೀಟ್ ಮಾಡಿದ್ದರು. ಅದು ಚರ್ಚೆಗೆ ಕಾರಣವಾಗಿದೆ.
ಹಲವರು ಬಾತ್ ರೂಂ ಒಡೆದ, ಪ್ರೆಶರ್ ಇಲ್ಲದೆ ಶವರ್ ನಲ್ಲಿ ನೀರು ಬರುವ, ಬೊಟೆಲ್ ಹಾಕಿ ಶವರ್ ಮಾಡಿಕೊಂಡ ಫೋಟೋ, ವಿಡಿಯೋವನ್ನು ಪ್ರತಿಕ್ರಿಯೆಯಾಗಿ ಮಾಡಿದ್ದಾರೆ. ತಮ್ಮದೂ ಇದೇ ಪರಿಸ್ಥಿತಿ ಎಂದು ತೋರಿಸಿಕೊಂಡಿದ್ದಾರೆ.