alex Certify ಕೊರೊನಾ ಸೋಂಕಿನ ನಡುವೆಯೂ ವಿಶಿಷ್ಟವಾಗಿ ವಿವಾಹವಾದ ನವಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿನ ನಡುವೆಯೂ ವಿಶಿಷ್ಟವಾಗಿ ವಿವಾಹವಾದ ನವಜೋಡಿ

ಕೊರೊನಾ ಸಂಕಷ್ಟದಿಂದಾಗಿ ಮದುವೆಯಾಗೋದೇ ಕಷ್ಟ ಎಂಬಂತಾಗಿದೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಈ ಫೋಟೋದಲ್ಲಿ ಕೋವಿಡ್​ ಸೋಂಕಿಗೆ ಒಳಗಾಗಿದ್ದ ವಧುವಿನ ಮದುವೆ ಫೋಟೊ ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ.

ಸಾಮಾಜಿಕ ಅಂತರ ಕಾಪಾಡಿಕೊಂಡು ವಧು – ವರರಿಬ್ಬರು ಉಂಗುರ ಬದಲಾವಣೆ ಮಾಡಿಕೊಂಡ ಈ ವಿವಾಹದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಕೊರೊನಾ ನಡುವೆಯೂ ದಂಪತಿಯ ಉತ್ಸಾಹ ಹಾಗೂ ಸೃಜನಶೀಲತೆಗೆ ನೆಟ್ಟಿಗರು ಶಹಬ್ಬಾಸ್​ ಎಂದಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾ ನಿವಾಸಿ ಪ್ಯಾಟ್ರಿಕ್​ ಡೆಲ್ಗಾಡೋ ಹಾಗೂ ಲಾರೆನ್​ ಜಿಮೆನೆಜ್​​ ನವೆಂಬರ್ ತಿಂಗಳ ಅಂತ್ಯದಲ್ಲಿ ವಿವಾಹವಾಗಬೇಕಿತ್ತು. ಆದರೆ ಮದುವೆಗೆ ಇನ್ನೇನು ಮೂರು ದಿನ ಬಾಕಿ ಇರೋವಾಗ ವಧು ಲಾರೆನ್​ ಕೊರೊನಾ ಸೋಂಕಿಗೆ ಒಳಗಾದ್ರು. ಹೇಗಾದ್ರೂ ಮಾಡಿ ನಿಗದಿಯಾದ ದಿನಾಂಕದಂತೆ ಮದುವೆಯಾಗಲು ನಿರ್ಧರಿಸಿದ ಈ ಜೋಡಿ ವಧು ಮಹಡಿ ಮೇಲೆ ಹಾಗೂ ವರ ಕೆಳಗೆ ನಿಂತು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

https://www.instagram.com/p/CH3KWTIFTLD/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...