alex Certify ಈ ಪ್ರಾಜೆಕ್ಟ್ ಗಾಗಿ ವಿದ್ಯಾರ್ಥಿಗಳಿಗೆ ʼನಾಸಾʼ ನೀಡಲಿದೆ ಹಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಪ್ರಾಜೆಕ್ಟ್ ಗಾಗಿ ವಿದ್ಯಾರ್ಥಿಗಳಿಗೆ ʼನಾಸಾʼ ನೀಡಲಿದೆ ಹಣ

NASA Will Pay You Rs 7.5 Lakh to Help Harvest Water on Moon and Mars

ಚಂದ್ರ ಹಾಗೂ ಮಂಗಳ ಗ್ರಹದಲ್ಲಿ ನೀರಾವರಿ, ಕೃಷಿ ಮಾಡಲು ವಿಶ್ವವಿದ್ಯಾಲಯ ಮಟ್ಟದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನಾಸಾ ಆಹ್ವಾನಿಸಿದೆ. ಕುಡಿಯುವುದಕ್ಕಾಗಲೀ, ಬೆಳೆ ಬೆಳೆಯುವುದಕ್ಕಾಗಲೀ ನೀರು ಅತಿ ಮುಖ್ಯವಾದ್ದು. ಗಗನಯಾನ, ಬಾಹ್ಯಾಕಾಶ ಮಿಶನ್ ಗೂ ನೀರು ಬೇಕೇ ಬೇಕು.

ಭವಿಷ್ಯದಲ್ಲಿ ಚಂದ್ರ, ಮಂಗಳ ಸೇರಿದಂತೆ ಇತರೆ ಗ್ರಹಗಳ ಮೇಲೆ ಮನುಷ್ಯ ವಾಸ್ತವ್ಯ ಹೂಡಲು ಅನುಕೂಲಕರವಾದ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಹಾಗೆಂದು ಭೂಮಿಯಿಂದ ಅಲ್ಲಿವರೆಗೆ ನೀರು ಹೊತ್ತೊಯ್ಯುವುದು ಸುಲಭವಲ್ಲ ಹಾಗೂ ದುಬಾರಿಯೂ ಹೌದು. ಹೀಗಾಗಿ ಅಲ್ಲಿಯೇ ಕೃಷಿ, ನೀರಾವರಿ ಮಾಡುವುದರಿಂದ ಭವಿಷ್ಯದಲ್ಲಿ ಬದುಕಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಬಹುದು.

ಇದಕ್ಕಾಗಿ ನಾಸಾ ಸ್ಪರ್ಧೆಯೊಂದನ್ನು ಏರ್ಪಡಿಸಿದ್ದು, ಚಂದ್ರನಿಂದ ಮಂಗಳವರೆಗಿನ ಹಿಮ ಮತ್ತು ನಿರೀಕ್ಷಿತ ಸವಾಲುಗಳು – 2021 ಎಂಬ ಶೀರ್ಷಿಕೆ ಅಡಿ ಸ್ಪರ್ಧೆ ಆಯೋಜಿಸಿದೆ. ಅಗತ್ಯ ಪ್ರಾಜೆಕ್ಟ್ ಸಿದ್ಧಪಡಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳು, 2020ರ ನ.24 ರೊಳಗೆ ತಮ್ಮ ಪ್ರಾಜೆಕ್ಟ್ ಕಳುಹಿಸಿಕೊಡಬೇಕು. ಆಯ್ಕೆಯಾದ ಪ್ರಾಜೆಕ್ಟ್ ಗೆ 10 ತಂಡಕ್ಕೆ 10 ಸಾವಿರ ಡಾಲರ್ (7.5 ಲಕ್ಷ ರೂ.) ಪ್ರೋತ್ಸಾಹಧನ ಕೊಡಲಿದೆ.

ನಂತರದ 6 ತಿಂಗಳಲ್ಲಿ ಪ್ರಾಜೆಕ್ಟ್ ಪೂರ್ಣಗೊಳಿಸಬೇಕು. 2021 ರ ಜೂನ್ ತಿಂಗಳಲ್ಲಿ ವರ್ಜಿನಿಯಾದ ನಾಸಾ ಸಂಶೋಧನೆ ಕೇಂದ್ರದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪ್ರದರ್ಶಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...