alex Certify ಅಂತರಿಕ್ಷದಿಂದಲೂ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಅವಳಿ ಕಟ್ಟಡದ ಮೇಲಿನ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತರಿಕ್ಷದಿಂದಲೂ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಅವಳಿ ಕಟ್ಟಡದ ಮೇಲಿನ ದಾಳಿ

NASA Astronaut Shares Image of 9/11 Terror Attack as Captured from Space to Commemorate 19th Anniversary

ಅಮೆರಿಕದ ಅವಳಿ ಕಟ್ಟಡ ವರ್ಲ್ಡ್‌ ಟ್ರೇಂಡ್‌ ಸೆಂಟರ್‌ ಮೇಲೆ 2001ರ ಸೆ.9ರ ಮೇಲೆ ಉಗ್ರಗಾಮಿಗಳು ನಡೆಸಿದ ದಾಳಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಈ ದಾಳಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟರೆ, 25 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ದುರ್ಘಟನೆಯ ನೆನಪಿನಲ್ಲಿ ನಾಸಾ ವಿಜ್ಞಾನಿಯೊಬ್ಬರು ಸ್ಯಾಟಲೈಟ್‌ ಫೋಟೋವೊಂದನ್ನು ಬಿಡುಗಡೆಗೊಳಿಸಿದ್ದಾರೆ.

ಹೌದು, ಉಗ್ರರ ದಾಳಿ ನಡೆದು 19 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ದಾಳಿಯ ಸಮಯದಲ್ಲಿ ಅಂತರಿಕ್ಷದಿಂದ ತೆಗೆದಿರುವ ಫೋಟೋವನ್ನು ನಾಸದ ಗಗನಯಾತ್ರಿಯೊಬ್ಬರು ಶೇರ್‌ ಮಾಡಿದ್ದಾರೆ. ಜಾನಿ ಕಿಮ್‌ ಈ ಫೋಟೋವನ್ನು ಬಿಡುಗಡೆಗೊಳಿಸಿದ್ದು, ಈ ದುರ್ಘಟನೆಯನ್ನು ಮರೆಯಲು ಸಾಧ್ಯವಿಲ್ಲ. ನಾಸಾದ ಗಗನಯಾತ್ರಿ ದಾಳಿಯಾಗುವ ಮೊದಲು ಈ ಫೋಟೋವನ್ನು ತೆಗೆದಿರುವುದು ಎಂದು ಹೇಳಿದ್ದಾರೆ.

ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ಸಾವಿರಕ್ಕೂ ಹೆಚ್ಚು ಲೈಕ್‌ ಹಾಗೂ ನೂರಾರು ಕಾಮೆಂಟ್‌ಗಳು ಬಂದಿವೆ. ಅನೇಕರು ಈ ದುರ್ಘಟನೆಯನ್ನು ಮರೆಯಲು ಸಾಧ್ಯವಿಲ್ಲ ಎಂದರೆ, ಇನ್ನು ಕೆಲವರು ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂದು ಕಾಮೆಂಟ್‌ ಮಾಡಿದ್ದಾರೆ,

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...