ಅಮೆರಿಕದ ಅವಳಿ ಕಟ್ಟಡ ವರ್ಲ್ಡ್ ಟ್ರೇಂಡ್ ಸೆಂಟರ್ ಮೇಲೆ 2001ರ ಸೆ.9ರ ಮೇಲೆ ಉಗ್ರಗಾಮಿಗಳು ನಡೆಸಿದ ದಾಳಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಈ ದಾಳಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟರೆ, 25 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ದುರ್ಘಟನೆಯ ನೆನಪಿನಲ್ಲಿ ನಾಸಾ ವಿಜ್ಞಾನಿಯೊಬ್ಬರು ಸ್ಯಾಟಲೈಟ್ ಫೋಟೋವೊಂದನ್ನು ಬಿಡುಗಡೆಗೊಳಿಸಿದ್ದಾರೆ.
ಹೌದು, ಉಗ್ರರ ದಾಳಿ ನಡೆದು 19 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ದಾಳಿಯ ಸಮಯದಲ್ಲಿ ಅಂತರಿಕ್ಷದಿಂದ ತೆಗೆದಿರುವ ಫೋಟೋವನ್ನು ನಾಸದ ಗಗನಯಾತ್ರಿಯೊಬ್ಬರು ಶೇರ್ ಮಾಡಿದ್ದಾರೆ. ಜಾನಿ ಕಿಮ್ ಈ ಫೋಟೋವನ್ನು ಬಿಡುಗಡೆಗೊಳಿಸಿದ್ದು, ಈ ದುರ್ಘಟನೆಯನ್ನು ಮರೆಯಲು ಸಾಧ್ಯವಿಲ್ಲ. ನಾಸಾದ ಗಗನಯಾತ್ರಿ ದಾಳಿಯಾಗುವ ಮೊದಲು ಈ ಫೋಟೋವನ್ನು ತೆಗೆದಿರುವುದು ಎಂದು ಹೇಳಿದ್ದಾರೆ.
ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಸಾವಿರಕ್ಕೂ ಹೆಚ್ಚು ಲೈಕ್ ಹಾಗೂ ನೂರಾರು ಕಾಮೆಂಟ್‌ಗಳು ಬಂದಿವೆ. ಅನೇಕರು ಈ ದುರ್ಘಟನೆಯನ್ನು ಮರೆಯಲು ಸಾಧ್ಯವಿಲ್ಲ ಎಂದರೆ, ಇನ್ನು ಕೆಲವರು ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂದು ಕಾಮೆಂಟ್ ಮಾಡಿದ್ದಾರೆ,