ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ನೋಟ ಸೆರೆಹಿಡಿದ ಗಗನಯಾತ್ರಿ 27-11-2020 5:28PM IST / No Comments / Posted In: Latest News, International ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ ಗಗನಯಾತ್ರಿ ವಿಕ್ಟರ್ ಗ್ಲೋವರ್ ಟ್ವಿಟರ್ನಲ್ಲಿ ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ನೋಟವನ್ನ ಹಂಚಿಕೊಂಡಿದ್ದಾರೆ. ಕ್ಯಾಮರಾವನ್ನ ಭೂಮಿಯ ಕಡೆ ಹಿಡಿದ ಗ್ಲೋವರ್, ಈ ಅದ್ಭುತ ದೃಶ್ಯವನ್ನ ಸೆರೆಹಿಡಿದಿದ್ದಾರೆ. ಬಾಹ್ಯಾಕಾಶದಿಂದ ನನ್ನ ಮೊದಲ ವಿಡಿಯೋ ಎಂದು ಕ್ಯಾಪ್ಶನ್ ಬರೆದು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಟ್ವೀಟಿಗರು ನಾವು ಬಾಹ್ಯಾಕಾಶಕ್ಕೆ ಹೋಗಬೇಕು ಅಂತಾ ಆಸೆ ಹೊರಹಾಕಿದ್ದಾರೆ. My first video from space! Looking at the Earth through the window of Dragon Resilience. The scale of detail and sensory inputs made this a breathtaking perspective! pic.twitter.com/n7b5x0XLIp — Victor Glover (@AstroVicGlover) November 24, 2020