alex Certify ಉಲ್ಕಾ ಶಿಲೆ ಅಪ್ಪಳಿಸಿದ ಸುದ್ದಿ ಬೆನ್ನತ್ತಿದ ವೇಳೆ ಬಯಲಾಗಿದ್ದೇ ಬೇರೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಲ್ಕಾ ಶಿಲೆ ಅಪ್ಪಳಿಸಿದ ಸುದ್ದಿ ಬೆನ್ನತ್ತಿದ ವೇಳೆ ಬಯಲಾಗಿದ್ದೇ ಬೇರೆ….!

ಮೆಲ್ಬೋರ್ನ್: ಆಸ್ಟ್ರೇಲಿಯಾದ ಶಾಲೆಯೊಂದರ ಮೈದಾನದಲ್ಲಿ ಉಲ್ಕಾ ಶಿಲೆ ಅಪ್ಪಳಿಸಿದ ಬಗ್ಗೆ ಅಮೆರಿಕನ್ ಸ್ಪೇಸ್ ಏಜೆನ್ಸಿ ‘ನಾಸಾ’ ವರದಿ ಕೇಳಿದೆ. ಮೈದಾನದಲ್ಲಿ ಉಲ್ಕಾ ಶಿಲೆ ಬಿದ್ದು ಸುತ್ತಲಿನ ಜಾಗ ಸುಟ್ಟ ಫೋಟೋವೊಂದು ಸೋಮವಾರ ವೈರಲ್ ಆಗಿತ್ತು.

ಆಸ್ಟ್ರೇಲಿಯನ್ ಕ್ರ್ಯಾಶ್ ಇನ್ವೆಸ್ಟಿಗೇಶನ್ ಯುನಿಟ್ ನ ಫೇಸ್ ಬುಕ್ ಪೇಜ್ ನಲ್ಲಿ ಸೋಮವಾರ ಈ ಫೋಟೋವನ್ನು ಅಪ್ ಲೋಡ್ ಮಾಡಲಾಗಿತ್ತು. ಕ್ವೀನ್ಸ್ ಲ್ಯಾಂಡ್ ನ ಶಾಲೆಯೊಂದರ ಮೈದಾನದಲ್ಲಿ ಘಟನೆ ನಡೆದ ಬಗ್ಗೆ 7 ನ್ಯೂಸ್ ಎಂಬ ಸುದ್ದಿ ಸಂಸ್ಥೆ ವರದಿ ಮಾಡಿತ್ತು. “ಮಲಾಂಡ್ ಸ್ಟೇಟ್ ಸ್ಕೂಲ್ ಗ್ರೌಂಡ್ ನಲ್ಲಿ ಉಲ್ಕಾ ಶಿಲೆಯೊಂದು ಬಿದ್ದಿದೆ. ಪೊಲೀಸರು ಅದನ್ನು ವೀಕ್ಷಿಸುತ್ತಿದ್ದಾರೆ” ಎಂದು ಬರೆಯಲಾಗಿತ್ತು. 2400 ಜನ ಅದನ್ನು ಶೇರ್ ಮಾಡಿದ್ದರು. 2 ಸಾವಿರಕ್ಕೂ ಅಧಿಕ ಕಮೆಂಟ್ ಗಳು ಬಂದಿದ್ದವು.

ಮೊಣಕೈ ಉದ್ದದ ಬಾಳೆಹಣ್ಣು ಕಂಡು ಬೆರಗಾದ ಮಹಿಳೆ…!

ನಾಸಾದಿಂದ, ಕೆನಡಿಯನ್ ಸ್ಪೇಸ್ ಸೆಂಟರ್ ನಿಂದ ಈ ಬಗ್ಗೆ ಸ್ಪಷ್ಟನೆ ಕೋರಿ ಕರೆ ಬಂದಿತ್ತು ಎಂದು ಮಲಾಂಡ್ ಶಾಲೆಯ ಪ್ರಾಂಶುಪಾಲ ಮಾರ್ಕ್ ಎಲನ್ 7 ನ್ಯೂಸ್ ಗೆ ತಿಳಿಸಿದ್ದಾರೆ. ಆದರೆ, ಇದು ನಿಜವಾದ ಉಲ್ಕಾಪಾತವಲ್ಲ. ಶಾಲೆಯ ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಯೋಗಕ್ಕಾಗಿ ಈ ಪ್ರೊಜೆಕ್ಟ್ ಸಿದ್ಧ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಉಲ್ಕಾಪಾತದ ಬಗ್ಗೆ ವರದಿ ಮಾಡುವ ಟಾಸ್ಕ್ ನೀಡಲಾಗಿತ್ತು. ಸ್ಥಳೀಯ ಪೊಲೀಸರನ್ನೂ ಇದರಲ್ಲಿ ಭಾಗಿ ಮಾಡಿಕೊಳ್ಳಲಾಗಿತ್ತು ಎಂದು ಮಾರ್ಕ್ ಎಲನ್ ತಿಳಿಸಿದ್ದಾರೆ.

https://www.facebook.com/permalink.php?story_fbid=770508696901668&id=272238730062003

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...