ನಮೀಬಿಯಾದಲ್ಲಿ ಆನೆಗಳ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಬರಗಾಲ ಉಂಟಾಗಿರೋದ್ರಿಂದ 170 ಕಾಡಾನೆಗಳನ್ನ ಮಾರಾಟಕ್ಕೆ ಇಡಲಾಗಿದೆ ಅಂತಾ ದಕ್ಷಿಣ ಆಫ್ರಿಕಾದ ಪರಿಸರ ಸಚಿವಾಲಯ ಮಾಹಿತಿ ನೀಡಿದೆ.
ದಕ್ಷಿಣ ಆಫ್ರಿಕಾದ ಅರಣ್ಯ ಹಾಗೂ ಪ್ರವಾಸೋದ್ಯಮ ಸಚಿವಾಲಯ ನಮೀಬಿಯಾ ಅಥವಾ ವಿದೇಶದಲ್ಲಿರುವ ಅರ್ಹರಿಗೆ ಕಾಡು ಪ್ರಾಣಿಗಳನ್ನ ಹರಾಜು ಮಾಡೋದಾಗಿ ಹೇಳಿದೆ.
ವಿದೇಶಿ ಖರೀದಿದಾರರು ಅವರ ದೇಶದಲ್ಲಿ ಆನೆ ರಫ್ತಿಗೆ ಅವಕಾಶವಿದೆ ಎಂಬ ಪ್ರಮಾಣ ಪತ್ರವನ್ನ ಹೊಂದಿದ್ದಾರೆ ಮಾತ್ರ ವಿದೇಶಿಗರಿಗೆ ಹರಾಜು ಪ್ರಕ್ರಿಯೆಯಯಲ್ಲಿ ಭಾಗಿಯಾಗಲು ಅವಕಾಶ ಸಿಗಲಿದೆ.
ನಮೀಬಿಯಾದಲ್ಲಿ 1995ರಲ್ಲಿ 7500 ಇದ್ದ ಆನೆಗಳ ಸಂಖ್ಯೆ 2019ರ ಹೊತ್ತಿಗೆ 24000 ಆಗಿದೆ. ಹೀಗಾಗಿ 170 ಕಾಡಾನೆಗಳ ಮಾರಾಟಕ್ಕೆ ನಮೀಬಿಯಾ ಮುಂದಾಗಿದೆ.