alex Certify ಲ್ಯಾಪ್ ‌ಟಾಪ್‌ ಪಡೆಯಲು ಬೆತ್ತಲೆಯಾಗಿ ಹಂದಿ ಬೆನ್ನಟ್ಟಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲ್ಯಾಪ್ ‌ಟಾಪ್‌ ಪಡೆಯಲು ಬೆತ್ತಲೆಯಾಗಿ ಹಂದಿ ಬೆನ್ನಟ್ಟಿದ ಭೂಪ…!

ತನ್ನ ಲ್ಯಾಪ್‌ ಟಾಪ್ ಕದ್ದಿದ್ದ ಕಾಡುಹಂದಿಯೊಂದರ ಬೆನ್ನು ಹತ್ತಿದ ಬೆತ್ತಲೆ ವ್ಯಕ್ತಿಯೊಬ್ಬನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬರ್ಲಿನ್‌ನ ಗ್ರನ್ವೆಲ್‌ ಕಾಡಿನ ಬಳಿಯ ಟೆಫುಲ್ಲೆಸೆ ಕೆರೆ ಬಳಿ ಸೆರೆ ಹಿಡಿಯಲಾದ ಈ ಚಿತ್ರದಲ್ಲಿ ಬಿಸಿಲಿನ ಮಜ್ಜನ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕಾಡು ಹಂದಿ ಹಾಗೂ ಅದರ ಎರಡು ಮರಿಗಳನ್ನು ಬೆನ್ನಟ್ಟಿ ಓಡುವುದನ್ನು ನೋಡಬಹುದಾಗಿದೆ.

ಲ್ಯಾಪ್‌ಟಾಪ್ ಇರುವ ಹಳದಿ ಬ್ಯಾಗ್‌ ಅನ್ನು ಕಾಡು ಹಂದಿ ಎತ್ತಿಕೊಂಡು ಓಡಿಹೋಗುತ್ತಿದ್ದು, ಅದನ್ನು ಬೆನ್ನತ್ತಿರುವ ವ್ಯಕ್ತಿಯನ್ನು ನೋಡಬಹುದಾಗಿದೆ.

ಚಿತ್ರವು ಫೇಸ್ಬುಕ್‌ನಲ್ಲಿ ವೈರಲ್ ಆಗಿದ್ದು, 12,000ಕ್ಕೂ ಹೆಚ್ಚು ಶೇರ್‌ಗಳು ಹಾಗೂ 8,000ಕ್ಕೂ ಅಧಿಕ ಲೈಕ್‌ಗಳನ್ನು ಗಿಟ್ಟಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...