ಕೃಷಿ ಭೂಮಿಯಲ್ಲಿ ಬೆಳೆಗಳ ಪ್ಯಾಟರ್ನ್‌ಗಳ ಬಗ್ಗೆ ನಾವೆಲ್ಲಾ ಈಗಾಗಲೇ ಸಾಕಷ್ಟು ಬಾರಿ ಕೇಳಿದ್ದೇವೆ. ಅದರಲ್ಲೂ ಅಮೆರಿಕ ಹಾಗೂ ಯೂರೋಪ್‌ಗಳಲ್ಲಿ ಇಂಥ ಹಲವು ನಿದರ್ಶನಗಳಿವೆ.
ಬೆಳೆ ಬೆಳೆಯುವ ಪ್ರದೇಶದಲ್ಲಿ ನಾನಾ ನಮೂನೆಯ ಆಕಾರಗಳಲ್ಲಿ ಕಟಾವು ಮಾಡುವ ಮೂಲಕ ರಚಿಸಲಾಗುವ ಈ ಪ್ಯಾಟರ್ನ್‌ಗಳ ವೈಮಾನಿಕ ಚಿತ್ರಗಳು ನೋಡಲು ಚೆನ್ನಾಗಿರುತ್ತವೆ.
ಇತ್ತೀಚೆಗೆ ಫ್ರಾನ್ಸ್‌ನ ಉತ್ತರ ಭಾಗದ ಲೆನ್ಸ್ ಬಳಿಯ ಕೃಷಿ ಭೂಮಿಯೊಂದರಲ್ಲಿ ಇಂಥದ್ದೇ ಒಂದು ಪ್ಯಾಟರ್ನ್ ಕಂಡುಬಂದಿದ್ದು, ಇದನ್ನು ‘Templar Cross’ ಎಂದು ಕರೆಯಲಾಗುತ್ತಿದೆ. ಇದನ್ನು ಯಾರು ಮಾಡಿದರು ಎಂದು ಖುದ್ದು ಆ ಜಮೀನಿನ ಮಾಲೀಕರಿಗೂ ಗೊತ್ತಿಲ್ಲವಂತೆ. ಈ ರಚನೆಗಳ ಹಿಂದೆ ಸಾಕಷ್ಟು ಮೌಢ್ಯಗಳೂ ಇವೆ.