ಲಂಡನ್: ಲಂಡನ್ ಹಾರ್ಬರ್ ಎಂಬ ದ್ವೀಪದ ಕಡಲ ತೀರದಲ್ಲಿ ಲೋಹದ ಬಾಲ್ ಒಂದು ಪತ್ತೆಯಾಗಿದ್ದು ಅಚ್ಚರಿ ಮೂಡಿಸಿದೆ. ಬ್ರಿಟಿಷ್ ಮಹಿಳೆ ಮೆನನ್ ಕ್ಲರ್ಕ್ ಎಂಬುವವರು ತಮ್ಮ ಕುಟುಂಬದ ಜತೆ ಪ್ರವಾಸ ತೆರಳಿದಾಗ ಈ ಬಾಲ್ ಪತ್ತೆಯಾಗಿದೆ.
ಬಾಲ್ ಮೇಲೆ ರಷ್ಯನ್ ಭಾಷೆಯಲ್ಲಿ ಗರಿಷ್ಠ ತಾಪಮಾನ 170 ಡಿಗ್ರಿ ಸೆಲ್ಶಿಯಸ್ ಹಾಗೂ 196 ಡಿಗ್ರಿ ಸೆಲ್ಶಿಯಸ್, ಸಂಗ್ರಹಣಾ ಸಾಮರ್ಥ್ಯ 43 ಲೀಟರ್ ಎಂದು ಬರೆಯಲಾಗಿದೆ.
ಪ್ರಮುಖ ಪ್ರವಾಸಿ ತಾಣ ಚೆನ್ನೈನ ʼಮರೀನಾ ಬೀಚ್ʼ
“ನಾವು ನಡೆದುಕೊಂಡು ಹೋದಾಗ ಮರಳಲ್ಲಿ ಹೊಳೆಯುವ ವಸ್ತುವೊಂದು ಕಾಣಿಸಿತು. ಸ್ವಲ್ಪ ಮರಳು ತೆಗೆದು ನೋಡಿದಾಗ ರಷ್ಯನ್ ಭಾಷೆಯ ಬರವಣಿಗೆ ಕಾಣಿಸಿತು. ಆದರೆ, ಅದನ್ನು ತೆಗೆಯಲು ಸಾಧ್ಯವಾಗಿಲ್ಲ. ಭಾರೀ ಗಟ್ಟಿಯಾಗಿದೆ” ಎಂದು ಕ್ಲರ್ಕ್ ಹೇಳಿದ್ದಾರೆ.
ಸುಮಾರು 41 ಕೆಜಿ ತೂಕವಿರುವ ಈ ಬಾಲ್ ರಾಕೆಟ್ ಅಥವಾ ಸ್ಪೇಸ್ ಕ್ರಾಫ್ಟ್ ನ ಹೈಡ್ರೋಜನ್ ಪ್ರೊಫೆಲ್ಲೆಂಟ್ ಟ್ಯಾಂಕ್ ಆಗಿರಬಹುದು ಎಂದು ಗಗನಯಾನಿ ಮಾರ್ಕ್ ಮೊರ್ಬಿಟೊ ಹೇಳಿದ್ದಾರೆ.