ತನ್ನ ಮೊದಲ ಕ್ರಿಸ್‌ಮಸ್ ಸಂಭ್ರಮಾಚರಣೆಯ ಕುರಿತು ಮುಸ್ಲಿಂ ವ್ಯಕ್ತಿಯೊಬ್ಬ ವಿವರಿಸಿರುವ ಟ್ವಿಟರ್ ಥ್ರೆಡ್ ಒಂದು ವೈರಲ್ ಆಗಿದೆ.
ಕೆನಡಾದಲ್ಲಿರುವ ಮೊಹಮ್ಮದ್ ಹುಸೇನ್ ಡಿಸೆಂಬರ್ 20ರಂದು ಈ ಟ್ವೀಟ್ ಮಾಡಿದ್ದು, ಸಾಂಕ್ರಮಿಕದ ಕಾರಣದಿಂದ ತನ್ನ ತವರಿಗೆ ಹೋಗಲು ಸಾಧ್ಯವಾಗದೇ ಇರುವ ಕಾರಣದಿಂದ, ಕ್ರಿಸ್‌ಮಸ್ ಬಗ್ಗೆ ತನ್ನೆಲ್ಲಾ ಚಿಂತನೆಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾನೆ.
“ಮುಸ್ಲಿಂ ಕುಟುಂಬದಲ್ಲಿ ಬೆಳೆದ ನಾನು ಎಂದಿಗೂ ಕ್ರಿಸ್‌ಮಸ್ ಆಚರಿಸಿಲ್ಲ. ಈ ವರ್ಷ ಸಾಂಕ್ರಮಿಕದ ಕಾರಣದಿಂದ ನಾನು ಮನೆಗೆ ಹೋಗುತ್ತಿಲ್ಲ. ಹಾಗಾಗಿ ನನ್ನ ಸಹವರ್ತಿಗಳಿಂದ ಕ್ರಿಸ್‌ಮಸ್ ಆಚರಿಸುವುದು ಹೇಗೆ ಎಂದು ಕಲಿಯುತ್ತಿದ್ದೇನೆ. ನಾನು ಈ ಸಂಭ್ರಮವನ್ನು ಮಾನವಶಾಸ್ತ್ರದ ಪ್ರಾವೀಣ್ಯದಿಂದ ನೋಡುತ್ತಿದ್ದೇನೆ” ಎಂದು ಮೊಹಮ್ಮದ್ ಹೇಳಿಕೊಂಡಿದ್ದಾರೆ.
ನವೆಂಬರ್ ಮಧ್ಯದಿಂದ ಆರಂಭಗೊಂಡು ಹೊಸ ವರ್ಷದವರೆಗೂ ಸಾಗುವ ಕ್ರಿಸ್‌ಮಸ್ ಸಂಭ್ರಮದ ವಿವಿಧ ಮಜಲುಗಳ ಬಗ್ಗೆ ಮೊಹಮ್ಮದ್ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.