alex Certify 140 ವರ್ಷದ ಹಿಂದಿನ ಎರಡಂತಸ್ತಿನ ಕಟ್ಟಡ ಹೊಸ ವಿಳಾಸಕ್ಕೆ ಶಿಫ್ಟ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

140 ವರ್ಷದ ಹಿಂದಿನ ಎರಡಂತಸ್ತಿನ ಕಟ್ಟಡ ಹೊಸ ವಿಳಾಸಕ್ಕೆ ಶಿಫ್ಟ್…!

ಸ್ಯಾನ್​ ಫ್ರಾನ್ಸಿಸ್ಕೋದ 807 ಫ್ರಾಂಕ್ಲಿನ್​ ಸೇಂಟ್​​ನಲ್ಲಿ ಬರೋಬ್ಬರಿ 139 ವರ್ಷದ ಹಳೆಯ 2 ಅಂತಸ್ತಿನ ವಿಕ್ಟೋರಿಯನ್​ ಬಂಗಲೆಯನ್ನ ಸ್ಥಳಾಂತರಿಸಲಾಗಿದೆ.

ದೊಡ್ಡ ಕಿಟಕಿ. ಕಂದು ಬಣ್ಣದ ಬಾಗಿಲನ್ನ ಹೊಂದಿರುವ ಹಸಿರು ಬಣ್ಣದ ಮನೆಯನ್ನ ಬೃಹತ್​​ ಗಾತ್ರದ ಚಕ್ಕಡಿ ಮಾದರಿಯ ಗಾಡಿಯಲ್ಲಿ ಕೂರಿಸಿ ಭಾನುವಾರ ದೂರದ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಈ ಬಂಗಲೆಯನ್ನ ಸ್ಥಳಾಂತರಿಸುವ ವೇಳೆ 15ಕ್ಕೂ ಹೆಚ್ಚು ನಗರ ಏಜೆನ್ಸಿಗಳಿಂದ ಪರವಾನಗಿ ಪಡೆಯಲಾಗಿದೆ. ಕಟ್ಟಡ ಸ್ಥಳಾಂತರಿಸುವ ವೇಳೆ ಪಾರ್ಕಿಂಗ್​ ಮೀಟರ್​ಗಳನ್ನ ತೆರವು ಮಾಡಲಾಗಿತ್ತು. ಟ್ರಾಫಿಕ್​ ಸಿಗ್ನಲ್​ ತೆಗೆದು ಹಾಕಲಾಯ್ತು ಮತ್ತು ಮರಗಳನ್ನ ಕತ್ತರಿಸಲಾಗಿತ್ತು.

ಆರು ಮಲಗುವ ಕೋಣೆಗಳನ್ನ ಹೊಂದಿರುವ ಈ ಮನೆಯ ಮಾಲೀಕ ಸ್ಯಾನ್​ ಫ್ರಾನ್ಸಿಸ್ಕೋದ ಬ್ರೋಕರ್​ ಟೀಂ ಬ್ರೌನ್​, ಈ ಮನೆಯನ್ನ ಸ್ಥಳಾಂತರಿಸೋದಕ್ಕೆ 4 ಲಕ್ಷ ಡಾಲರ್​ ಪಾವತಿ ಮಾಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...