ಸ್ಯಾನ್ ಫ್ರಾನ್ಸಿಸ್ಕೋದ 807 ಫ್ರಾಂಕ್ಲಿನ್ ಸೇಂಟ್ನಲ್ಲಿ ಬರೋಬ್ಬರಿ 139 ವರ್ಷದ ಹಳೆಯ 2 ಅಂತಸ್ತಿನ ವಿಕ್ಟೋರಿಯನ್ ಬಂಗಲೆಯನ್ನ ಸ್ಥಳಾಂತರಿಸಲಾಗಿದೆ.
ದೊಡ್ಡ ಕಿಟಕಿ. ಕಂದು ಬಣ್ಣದ ಬಾಗಿಲನ್ನ ಹೊಂದಿರುವ ಹಸಿರು ಬಣ್ಣದ ಮನೆಯನ್ನ ಬೃಹತ್ ಗಾತ್ರದ ಚಕ್ಕಡಿ ಮಾದರಿಯ ಗಾಡಿಯಲ್ಲಿ ಕೂರಿಸಿ ಭಾನುವಾರ ದೂರದ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಈ ಬಂಗಲೆಯನ್ನ ಸ್ಥಳಾಂತರಿಸುವ ವೇಳೆ 15ಕ್ಕೂ ಹೆಚ್ಚು ನಗರ ಏಜೆನ್ಸಿಗಳಿಂದ ಪರವಾನಗಿ ಪಡೆಯಲಾಗಿದೆ. ಕಟ್ಟಡ ಸ್ಥಳಾಂತರಿಸುವ ವೇಳೆ ಪಾರ್ಕಿಂಗ್ ಮೀಟರ್ಗಳನ್ನ ತೆರವು ಮಾಡಲಾಗಿತ್ತು. ಟ್ರಾಫಿಕ್ ಸಿಗ್ನಲ್ ತೆಗೆದು ಹಾಕಲಾಯ್ತು ಮತ್ತು ಮರಗಳನ್ನ ಕತ್ತರಿಸಲಾಗಿತ್ತು.
ಆರು ಮಲಗುವ ಕೋಣೆಗಳನ್ನ ಹೊಂದಿರುವ ಈ ಮನೆಯ ಮಾಲೀಕ ಸ್ಯಾನ್ ಫ್ರಾನ್ಸಿಸ್ಕೋದ ಬ್ರೋಕರ್ ಟೀಂ ಬ್ರೌನ್, ಈ ಮನೆಯನ್ನ ಸ್ಥಳಾಂತರಿಸೋದಕ್ಕೆ 4 ಲಕ್ಷ ಡಾಲರ್ ಪಾವತಿ ಮಾಡಿದ್ದಾರೆ ಎನ್ನಲಾಗಿದೆ.