alex Certify ಉದ್ಯಾನದಲ್ಲಿ ಕಂಡು ಬಂತು ಪ್ರಾಚೀನ ರೋಮನ್ ಕಲಾಕೃತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯಾನದಲ್ಲಿ ಕಂಡು ಬಂತು ಪ್ರಾಚೀನ ರೋಮನ್ ಕಲಾಕೃತಿ

Move Over Monoliths, a Stone Found in English Woman's Garden Turned Out to be Roman Artefact

ಇಂಗ್ಲೆಂಡ್‌ನ ಬಂಗಲೆಯೊಂದರ ಉದ್ಯಾನದಲ್ಲಿ ಮಾರ್ಬಲ್‌ನ ತುಂಡೊಂದು ಸಿಕ್ಕಿದ್ದು, ಇದು ಪ್ರಾಚೀನ ರೋಮನ್ ಕಾಲಘಟ್ಟದ್ದು ಎಂದು ಪ್ರಾಚ್ಯವಸ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎರಡನೇ ಶತಮಾನಕ್ಕೆ ಸೇರಿದ ಈ ವಸ್ತುವಿನ ಮೇಲೆ ಗ್ರೀಕ್ ಭಾಷೆಯ ಲಿಪಿಗಳು ಕಂಡುಬಂದಿದೆ.

ದಕ್ಷಿಣ ಇಂಗ್ಲೆಂಡ್‌ನ ವೈಟ್‌ಪಾರಿಶ್ ಗ್ರಾಮದಲ್ಲಿ ಇರುವ ಈ ಬಂಗಲೆಯ ಮಾಲೀಕರಿಗೆ 20 ವರ್ಷಗಳ ಹಿಂದೆ ಈ ವಸ್ತು ಸಿಕ್ಕಿತ್ತು. ಈ ವಸ್ತುವನ್ನು ಕುದುರೆಲಾಯದಲ್ಲಿ ಬಳಸುತ್ತಿದ್ದರಂತೆ ಈ ಬಂಗಲೆಯ ಮಾಲೀಕರು.

ಈ ಮೌಂಟಿಂಗ್‌ ಬ್ಲಾಕ್‌ ಅದು ಹೇಗೆ ಈ ಬಂಗಲೆಯ ಉದ್ಯಾನದಲ್ಲಿ ಬಂತು ಎಂದು ತಜ್ಞರು ತಲೆಕೆಡಿಸಿಕೊಂಡು ಉತ್ತರ ಹುಡುಕುತ್ತಿದ್ದಾರೆ. 18 ಹಾಗೂ 19ನೇ ಶತಮಾನದಲ್ಲಿ ಇಂಗ್ಲೆಂಡಿನ ಸಿರಿವಂತ ಮಂದಿ ಯೂರೋಪ್‌ನಾದ್ಯಂತ ಸಂಚರಿಸಿ ವಿಶೇಷ ವಸ್ತುಗಳನ್ನು ತಮ್ಮೊಂದಿಗೆ ತರುತ್ತಿದ್ದ ವೇಳೆ ಈ ವಸ್ತು ಬಂದಿರಬಹುದು ಎಂದು ಆಂಟಿಕ್ ವಸ್ತುಗಳ ತಜ್ಞ ವಿಲ್ ಹಾಬ್ಸ್ ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...