ಬಾಯಿಯೊಳಗಿರುವ ಕೀಟಾಣುಗಳು ನಾಶವಾಗಲಿ ಅಂತಾ ಬಳಸುವ ಮೌತ್ವಾಶ್ಗಳು ಕೊರೊನಾ ವೈರಸ್ನ್ನೂ ಸಾಯಿಸಬಲ್ಲುವು ಎಂಬ ಕುತೂಹಲಕಾರಿ ಅಂಶ ಅಧ್ಯಯನವೊಂದರಲ್ಲಿ ಬಯಲಾಗಿದೆ.
ಕಾರ್ಡಿಫ್ ಯೂನಿವರ್ಸಿಟಿಯ ಸಂಶೋಧಕರು, ಮೌತ್ವಾಶ್ ಕೆಲವೇ ಸೆಕೆಂಡ್ಗಳಲ್ಲಿ ಕೊರೊನಾ ವೈರಸ್ಗಳನ್ನ ಸಾಯಿಸುತ್ತವೆ ಎಂದು ಸಾಬೀತುಪಡಿಸಿದ್ದಾರೆ. ಆದರೆ ಈ ಅಧ್ಯಯನದ ಫಲಿತಾಂಶ ಇನ್ನೂ ಅಧಿಕೃತವಾಗಿಲ್ಲ.
ಅಧ್ಯಯನ ಹೇಳುವಂತೆ, ಮೌತ್ವಾಶ್ನಲ್ಲಿರುಚ 0.07 ಶೇ. ಸಿಥೈಲ್ ಕ್ಲೊರೈಡ್ ಅಂಶ ಈ ಕೊರೊನಾ ವೈರಸ್ನ್ನ ನಾಶ ಮಾಡುವ ಗುಣವನ್ನ ಹೊಂದಿವೆಯಂತೆ. ಈ ಮೌತ್ ವಾಶ್ನಿಂದ ಕೊರೊನಾ ಸೋಂಕು ತಗಲುವ ಸಾಧ್ಯತೆ ಕಡಿಮೆ ಮಾಡಬಹುದು. ಆದರೆ ಇದು ಶ್ವಾಸಕೋಶಕ್ಕೆ ತಗುಲಿರುವ ಸೋಂಕನ್ನ ನಾಶ ಮಾಡುವ ಸಾಮರ್ಥ್ಯ ಹೊಂದಿರದ ಕಾರಣ ಈ ಮೌತ್ವಾಶ್ ಗಳನ್ನ ಕೊರೊನಾ ವಿರುದ್ಧದ ಚಿಕಿತ್ಸೆಯಾಗಿ ಬಳಕೆ ಮಾಡೋಕೆ ಸಾಧ್ಯವಿಲ್ಲ ಎಂದೂ ಸಂಶೋಧಕರು ಹೇಳಿದ್ದಾರೆ.