alex Certify ತಾಯಿ ONLINE ಹುಚ್ಚಿಗೆ ಕಣ್ಣ ಮುಂದೆಯೇ ಪ್ರಾಣ ಬಿಟ್ಟ 3 ತಿಂಗಳ ಮಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ ONLINE ಹುಚ್ಚಿಗೆ ಕಣ್ಣ ಮುಂದೆಯೇ ಪ್ರಾಣ ಬಿಟ್ಟ 3 ತಿಂಗಳ ಮಗು

ಮೊದಲ ಬಾರಿ ತಾಯಿಯಾದ ಮಹಿಳೆಯೊಬ್ಬಳು ತನ್ನ ತಪ್ಪಿಗೆ ಮಗುವನ್ನು ಬಲಿ ಕೊಟ್ಟಿದ್ದಾಳೆ. ಘಟನೆ ಚೀನಾದಲ್ಲಿ ನಡೆದಿದೆ. ಮಹಿಳೆ, ಉತ್ತಮ ತಾಯಿಯಾಗುವ ಬಗ್ಗೆ ಆನ್ಲೈನ್ ಕೋರ್ಸ್ ತೆಗೆದುಕೊಳ್ಳುತ್ತಿದ್ದಳು. ಈ ವೇಳೆ ಇನ್ನೊಂದು ರೂಮಿನಲ್ಲಿದ್ದ ಮಗು ಪ್ರಾಣಬಿಟ್ಟಿದೆ.

ಮಹಿಳೆ ಮನೆಯ ಒಂದು ಕೋಣೆಯಲ್ಲಿ ಆನ್ಲೈನ್ ಕ್ಲಾಸ್ ತೆಗೆದುಕೊಳ್ತಿದ್ದಳು. ಇನ್ನೊಂದು ಕೋಣೆಯಲ್ಲಿ ಮಗುವನ್ನು ತೊಟ್ಟಿಲಲ್ಲಿ ಮಲಗಿಸಲಾಗಿತ್ತು. ಸ್ಪೀಕರ್ ಮೂಲಕ ನಿರ್ದೇಶನ ನೀಡಲಾಗ್ತಾಯಿತ್ತು. ಈ ವೇಳೆ ಮಗು ಅಳಲು ಶುರು ಮಾಡಿದೆ. ಆನ್ಲೈನ್ ಕೋರ್ಸ್ ನಡೆಸುತ್ತಿದ್ದವರು ಹಾಗೂ ಈಗಾಗಲೇ ತರಬೇತಿ ಪಡೆದವರು ಮಹಿಳೆಗೆ ಆನ್ಲೈನ್ ನಲ್ಲಿಯೇ ಮಗುವಿಗೆ ನಿರ್ದೇಶನ ನೀಡಲು ಹೇಳಿದ್ದಾರೆ. ಮಗು ಅಳು ಹೆಚ್ಚಾಗ್ತಿದ್ದಂತೆ ಅದನ್ನು ಅದ್ರ ಪಾಡಿಗೆ ಬಿಡು. ಅದು ನಿದ್ರೆ ಮಾಡುತ್ತದೆ ಎಂದಿದ್ದಾರೆ. ತಾಯಿ ಅನೇಕ ಬಾರಿ ವಿನಂತಿ ಮಾಡಿಕೊಂಡರೂ ಆಕೆಯನ್ನು ಮಗುವಿರುವ ಕೋಣೆಗೆ ಬಿಡಲಿಲ್ಲ.

ಎರಡು ಗಂಟೆ ತರಬೇತಿ ನಡೆಸಿ ಕೋಣೆಗೆ ಬಂದ ತಾಯಿಗೆ ಮಗು ಸತ್ತಿರುವುದು ಗೊತ್ತಾಗಿದೆ. ಮಗು ಉಸಿರುಗಟ್ಟಿ ಸಾವನ್ನಪ್ಪಿದೆ. ನಂತ್ರ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಈ ಆನ್ಲೈನ್ ಕೋರ್ಸ್ ಮಹಿಳೆಯರಿಂದ 75,474 ರೂಪಾಯಿ ಶುಲ್ಕ ತೆಗೆದುಕೊಳ್ಳುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...