alex Certify ಪುತ್ರನ ಮದುವೆ ದಿನದಂದೇ ಪೋಷಕರಿಂದ ವಿಚಿತ್ರ ಘೋಷಣೆ..! ತಾಯಿ ಹೇಳಿದ ಸುದ್ದಿ ಕೇಳಿ ಶಾಕ್​ ಆದ ವಧು-ವರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರನ ಮದುವೆ ದಿನದಂದೇ ಪೋಷಕರಿಂದ ವಿಚಿತ್ರ ಘೋಷಣೆ..! ತಾಯಿ ಹೇಳಿದ ಸುದ್ದಿ ಕೇಳಿ ಶಾಕ್​ ಆದ ವಧು-ವರ..!

ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಅನ್ನೋದು ಸುಮಧುರ ಕ್ಷಣಗಳಲ್ಲಿ ಒಂದಾಗಿದೆ. ತಮ್ಮ ಜೀವನದ ಈ ವಿಶೇಷ ದಿನ ಅತ್ಯಂತ ಚೆನ್ನಾಗಿ ಇರಬೇಕು ಅನ್ನೋ ಆಸೆ ಯಾರಿಗೆ ಇರೋದಿಲ್ಲ..? ನಿಮ್ಮ ಪ್ರೀತಿಪಾತ್ರರೆಲ್ಲ ಒಂದೆಡೆ ಸೇರಿದಾಗ ನೀವು ನಿಮ್ಮ ಜೀವನದ ಒಂದು ದೊಡ್ಡ ಸುದ್ದಿಯನ್ನ ಶೇರ್​ ಮಾಡೋದು ಕೂಡ ನಿಮಗೆ ಸುಲಭ ಎನಿಸುತ್ತೆ.

ಆದರೆ ಈ ದೊಡ್ಡ ಸುದ್ದಿ ವಧು ವರರಿಗೆ ಶಾಕ್​ ಆಗುವಂತಿದ್ದರೆ ಕಷ್ಟ. ಆದರೆ ರೆಡಿಟ್​ನಲ್ಲಿ ಶೇರ್​ ಮಾಡಲಾದ ವಿಡಿಯೋದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ವಧು ವರರಿಬ್ಬರು ಮದುವೆ ದಿನ ತಾವು ತಂದೆಯಾಗುತ್ತಿರುವ ವಿಚಾರವನ್ನ ಶೇರ್​​ ಮಾಡಬೇಕೆಂದುಕೊಂಡಿದ್ದರು. ಆದರೆ ಅಚ್ಚರಿಯ ವಿಚಾರ ಅಂದರೆ ವರನ ತಾಯಿ ತಾನು ಗರ್ಭಿಣಿಯಾಗುತ್ತಿದ್ದೇನೆ ಎಂದು ಹೇಳಿದ್ದು ವಧು – ವರ ಸೇರಿದಂತೆ ಮದುವೆ ಕಾರ್ಯಕ್ರಮದಲ್ಲಿ ನೆರೆದಿದ್ದವರೆಲ್ಲ ಶಾಕ್​ ಆಗಿದ್ದಾರೆ.

24 ವರ್ಷದ ವಧು ಈ ವಿಚಾರವನ್ನ ಹಂಚಿಕೊಂಡಿದ್ದಾರೆ. ಕೋವಿಡ್​ ಕಾರಣದಿಂದಾಗಿ ಇವರ ಮದುವೆ ಸರಳವಾಗಿ ಆಯೋಜನೆಗೊಂಡಿತು. ಈ ಪುಟ್ಟ ಕಾರ್ಯಕ್ರಮದಲ್ಲಿ ನಾವು ಪೋಷಕರಾಗುತ್ತಿದ್ದೇವೆ ಎಂಬ ಶೇರ್​ ಮಾಡಬೇಕು ಎಂದುಕೊಂಡಿದ್ದೆವು. ಆದರೆ ನನ್ನ ಅತ್ತೆ ತಾನು ಸಹ ಗರ್ಭಿಣಿ ಎಂದು ಹೇಳಿದ್ದಾರೆ. ಆಕೆ ಇದನ್ನ ಹೇಳುವ ಮುನ್ನ ನಮ್ಮ ಬಳಿ ಅನುಮತಿಯನ್ನೂ ಕೇಳಿರಲಿಲ್ಲ. ನನ್ನ ಅತ್ತೆ ಇನ್ನೂ ಪ್ರಾಯದವರಂತೆಯೇ ಇದ್ದಾರೆ. ಅವರು ತಾವು ಗರ್ಭಿಣಿ ಎಂಬ ವಿಚಾರ ಹೇಳಿ ಎಲ್ಲರಿಗೂ ಶಾಕ್​ ನೀಡಿದ್ರು. ಆದರೆ ಇದರಿಂದಾಗಿ ನಾವು ನೀಡಬೇಕಿದ್ದ ಸಿಹಿ ಸುದ್ದಿ ಅಂದು ಹೇಳೋಕೆ ಆಗಲಿಲ್ಲ. ನನ್ನ ಪತಿ ಬಳಿ ಈ ವಿಚಾರವನ್ನ ಈಗ ಶೇರ್​ ಮಾಡೋದು ಬೇಡ ಎಂದು ಹೇಳಿದೆ ಅಂತಾ ಹೇಳಿದ್ದಾರೆ.

ನನ್ನ ಅತ್ತೆಯ ಸ್ವಾರ್ಥ ಗುಣದಿಂದ ಬೇಸರಗೊಂಡಿದ್ದ ನಾನು ಆಕೆಯ ಜೊತೆ ಕೆಲ ದಿನ ಮಾತನ್ನೂ ಬಿಟ್ಟಿದ್ದೆ. ಕೊರೊನಾ ಹಾಗೂ ನನ್ನ ಅತ್ತೆ ಇಬ್ಬರೂ ಸೇರಿ ನನ್ನ ಮದುವೆ ದಿನವನ್ನ ಹಾಳು ಮಾಡಿದ್ರು ಎಂದು ಬೇಸರ ಹೊರಹಾಕಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...