alex Certify ಪಶು ವೈದ್ಯರನ್ನ ಹುಡುಕಿಕೊಂಡು ಬಂದ ಬೆಕ್ಕು..! ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಶು ವೈದ್ಯರನ್ನ ಹುಡುಕಿಕೊಂಡು ಬಂದ ಬೆಕ್ಕು..! ವೈರಲ್​ ಆಯ್ತು ವಿಡಿಯೋ

ತಾಯಿ ಬೆಕ್ಕೊಂದು ವೈದ್ಯಕೀಯ ಸಹಾಯಕ್ಕಾಗಿ ತನ್ನ ಮರಿಯನ್ನ ಬಾಯಲ್ಲಿ ಕಚ್ಚಿಕೊಂಡು ನೇರವಾಗಿ ಆಸ್ಪತ್ರೆಗೇ ಹೋಗಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಟರ್ಕಿ ದೇಶದ ಇಜ್ಮಿರ್​ನ ಕರಬಗ್ಲರ್​ ಜಿಲ್ಲೆಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ವಿಡಿಯೋದಲ್ಲಿ ತಾಯಿ ಬೆಕ್ಕು ತನ್ನ ಮರಿಯನ್ನ ಕಚ್ಚಿಕೊಂಡು ಆಸ್ಪತ್ರೆಗೆ ಬಂದಿದೆ. ಆಸ್ಪತ್ರೆಯಲ್ಲಿದ್ದ ಜನರು ಕೂಡ ಬೆಕ್ಕಿಗೆ ದಾರಿ ಬಿಟ್ಟುಕೊಟ್ಟಿದ್ದಾರೆ.

ಆಸ್ಪತ್ರೆಯ ಸಿಬ್ಬಂದಿ ಈ ಹಿಂದೆ ತಾಯಿ ಬೆಕ್ಕಿಗೆ ನೀರು ಹಾಗೂ ಆಹಾರವನ್ನ ನೀಡಿ ಉಪಚರಿಸಿದ್ದರಂತೆ. ವೈದ್ಯರು ಮರಿ ಬೆಕ್ಕನ್ನ ಪರಿಶೀಲಿಸಿದ್ದು ಅದರ ಕಣ್ಣಿಗೆ ಸೋಂಕು ತಾಕಿದೆ ಎಂದಿದ್ದಾರೆ. ಪಶು ವೈದ್ಯ ಈ ಮರಿ ಬೆಕ್ಕನ್ನ ಉಪಚರಿಸಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...