ತಾಯಿ ಬೆಕ್ಕೊಂದು ವೈದ್ಯಕೀಯ ಸಹಾಯಕ್ಕಾಗಿ ತನ್ನ ಮರಿಯನ್ನ ಬಾಯಲ್ಲಿ ಕಚ್ಚಿಕೊಂಡು ನೇರವಾಗಿ ಆಸ್ಪತ್ರೆಗೇ ಹೋಗಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಟರ್ಕಿ ದೇಶದ ಇಜ್ಮಿರ್ನ ಕರಬಗ್ಲರ್ ಜಿಲ್ಲೆಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ವಿಡಿಯೋದಲ್ಲಿ ತಾಯಿ ಬೆಕ್ಕು ತನ್ನ ಮರಿಯನ್ನ ಕಚ್ಚಿಕೊಂಡು ಆಸ್ಪತ್ರೆಗೆ ಬಂದಿದೆ. ಆಸ್ಪತ್ರೆಯಲ್ಲಿದ್ದ ಜನರು ಕೂಡ ಬೆಕ್ಕಿಗೆ ದಾರಿ ಬಿಟ್ಟುಕೊಟ್ಟಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿ ಈ ಹಿಂದೆ ತಾಯಿ ಬೆಕ್ಕಿಗೆ ನೀರು ಹಾಗೂ ಆಹಾರವನ್ನ ನೀಡಿ ಉಪಚರಿಸಿದ್ದರಂತೆ. ವೈದ್ಯರು ಮರಿ ಬೆಕ್ಕನ್ನ ಪರಿಶೀಲಿಸಿದ್ದು ಅದರ ಕಣ್ಣಿಗೆ ಸೋಂಕು ತಾಕಿದೆ ಎಂದಿದ್ದಾರೆ. ಪಶು ವೈದ್ಯ ಈ ಮರಿ ಬೆಕ್ಕನ್ನ ಉಪಚರಿಸಿದ್ದಾರೆ.
https://youtu.be/HlIlNrpTiRE?t=40