alex Certify 2500 ವರ್ಷಗಳ ಹಿಂದಿನ 100ಕ್ಕೂ ಹೆಚ್ಚು ಮರದ ಶವಪೆಟ್ಟಿಗೆ ಈಜಿಪ್ಟ್ ನಲ್ಲಿ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2500 ವರ್ಷಗಳ ಹಿಂದಿನ 100ಕ್ಕೂ ಹೆಚ್ಚು ಮರದ ಶವಪೆಟ್ಟಿಗೆ ಈಜಿಪ್ಟ್ ನಲ್ಲಿ ಪತ್ತೆ

ಕಳೆದ ಸೆಪ್ಟೆಂಬರ್ ನಲ್ಲಿ ಈಜಿಪ್ಟ್ ನ ಸಮಾಧಿ ಸ್ಥಳದಿಂದ ಹೊರತೆಗೆದ 13 ಮರದ ಶವಪೆಟ್ಟಿಗೆಯು ಸುಮಾರು 2500 ವರ್ಷಗಳಷ್ಟು ಹಳೆಯದ್ದು ಎಂದು ಅಂದಾಜಿಸಲಾಗಿದೆ. ಇವುಗಳು ಸಖಾರಾದ ಮರುಭೂಮಿ ನೆಕ್ರೋಪೊಲಿಸ್ ನಲ್ಲಿ ಪತ್ತೆಯಾಗಿದ್ದು, ಇದು ಕೈರೋದಿಂದ ದಕ್ಷಿಣ ಭಾಗದ 30 ಕಿ.ಮೀ. ದೂರದಲ್ಲಿದೆ. ಈ ಶವಪೆಟ್ಟಿಗೆ ಸಂರಕ್ಷಿಸಿ ಇಡಲಾಗಿದೆ.

ಕೆಲವು ವಾರಗಳ ಹಿಂದಷ್ಟೇ ಈ ಮರದ ಶವಪೆಟ್ಟಿಗೆಗಳನ್ನು ಸಾರ್ವಜನಿಕರೆದರು ತೆರೆಯಲಾಗಿತ್ತು. ಇದರಲ್ಲಿರುವ ಮಮ್ಮಿಯನ್ನು (ಶವ) ಬಟ್ಟೆಯಲ್ಲಿ ಸುರಕ್ಷಿತವಾಗಿ ಸುತ್ತಿಡಲಾಗಿತ್ತು. ಮೊದಲಿಗೆ 13 ಶವಪೆಟ್ಟಿಗೆ ಕೇವಲ 10ರಿಂದ 12 ಮೀಟರ್ ಅಂತರದಲ್ಲಿ ದೊರೆತರೆ, ಸಮೀಪದಲ್ಲಿ ಇನ್ನೂ ಹಲವು ಶೋಧಿಸಿದಾಗ 73 ಶವಪೆಟ್ಟಿಗೆಗಳು ದೊರೆತವು.

ಶವಪೆಟ್ಟಿಗೆ ಹಾಗೂ ಅಲ್ಲಿ ಪತ್ತೆಯಾದ ಇನ್ನಿತರೆ ಕಲಾಕೃತಿಗಳನ್ನು ಸಖಾರಾದಲ್ಲಿ ತಾತ್ಕಾಲಿಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಉತ್ಖನನ ನಡೆಯುತ್ತಿದ್ದು, ಹೆಚ್ಚಿನ ಶವಪೆಟ್ಟಿಗೆ ಹಾಗೂ ಕಲಾಕೃತಿಗಳು ಪತ್ತೆಯಾಗುವ ನಿರೀಕ್ಷೆ ಇದೆ ಎಂದು ಪ್ರವಾಸೋದ್ಯಮ ಮತ್ತು ಪ್ರಾಚೀನ ವಸ್ತುಗಳ ಸಚಿವ ಖಲೀದ್ ಎಲ್ – ಅನನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...