ಮೃಗಾಲಯದಲ್ಲಿನ ಕೋತಿಗಳ ಮೇಲೆ ಸಂಶೋಧನೆಯೊಂದನ್ನ ನಡೆಸಲಾಗಿದ್ದು ಇದರಲ್ಲಿ ಕೋತಿಗಳು ಪಾಕೃತಿಕ ಶಬ್ದಗಳಿಗಿಂತ ಜಾಸ್ತಿ ಟ್ರಾಫಿಕ್ ಸೌಂಡ್ಗೆ ಹೆಚ್ಚು ಆದ್ಯತೆ ನೀಡುತ್ತವೆ ಎಂಬ ಅಂಶ ತಿಳಿದು ಬಂದಿದೆ.
ಪ್ರಾಣಿಗಳ ಮೇಲೆ ಆಧುನಿಕ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂಬುದನ್ನ ಅಧ್ಯಯನ ನಡೆಸಲು ಮೃಗಾಲಯವೊಂದರಲ್ಲಿ ಸಂಶೋಧನೆ ಕೈಗೊಳ್ಳಲಾಯ್ತು.
ಈ ಸಂಶೋಧನಲ್ಲಿ ಕೋತಿಗಳು ಮಧುರವಾದ ಸ್ವರವನ್ನ ಎಂಜಾಯ್ ಮಾಡೋದ್ರ ಬದಲು ಟ್ರಾಫಿಕ್ ಶಬ್ದಗಳಿಗೆ ಹೆಚ್ಚಾಗಿ ಪ್ರತಿಕ್ರಿಯಿಸಿವೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಫಿನ್ಲ್ಯಾಂಡ್ ಆಲ್ಟೋ ಯೂನಿವರ್ಸಿಟಿಯ ಸಂಶೋಧಕ ಇಲ್ಯೇನಾ, ನಾವು ಈ ಕೋತಿಗಳು ಮಧುರವಾದ ಸ್ವರಗಳನ್ನ ಹೆಚ್ಚು ಆನಂದಿಸುತ್ತವೆ ಎಂದು ಭಾವಿಸಿದ್ದೆವು. ಆದರೆ ನಮ್ಮ ಲೆಕ್ಕಚಾರ ತಪ್ಪಾಗಿದೆ ಅಂತಾ ಹೇಳಿದ್ರು.