
ಒಡಹುಟ್ಟಿದ ಕೋತಿ ಮರಿಗಳೆರಡು ಮರದ ಮೇಲೆ ನೇತುಹಾಕಿಕೊಂಡು, ಜಾಲಿ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಈ ಪುಟಾಣಿಗಳ ಚಿನ್ನಾಟವು ನೆಟ್ಟಿಗರಿಗೆ ಬಲೇ ಪ್ರಿಯವಾಗಿಬಟ್ಟಿದೆ.
ಓಹಿಯೋದಲ್ಲಿರುವ ಅಕ್ರಾನ್ ಮೃಗಾಲಯವು ಈ ವಿಡಿಯೋವನ್ನು ತನ್ನ ಫೇಸ್ಬುಕ್ ಪೇಜ್ನಲ್ಲಿ ಶೇರ್ ಮಾಡಿಕೊಂಡಿದೆ. ಗೋಲ್ಡನ್ ಲಯನ್ ಟ್ಯಾಮರಿಸನ್ಸ್ ಜಾತಿಯ ಮಂಗಗಳಾದ ಇವುಗಳ ಹೆಸರೂ ಸಹ ಅಷ್ಟೇ ಕ್ಯೂಟ್ ಆಗಿವೆ — ಮೈಕೋ ಹಾಗೂ ಕೋಕೋ ಎಂದು ಹೆಸರಿಡಲಾಗಿದೆ. ತಮ್ಮ ಟ್ರೈನಿಂಗ್ ಸೆಶನ್ಅನ್ನು ಮುಗಿಸಿದ ಬಳಿಕ ಮೆಚ್ಚಿನ ತಿಂಡಿಯನ್ನು ಮೆಲ್ಲುತ್ತಾ ಎಂಜಾಯ್ ಮಾಡುತ್ತಿರುವ ಮೈಕೋ & ಕೋಕೋಗಳ ಸಿರಿಯನ್ನು ನೋಡುವುದೇ ಒಂದು ಚಂದ.
ಈ ಮಂಗಗಳು ಕೊಮೋಡೋ ವಂಶಸ್ಥರಾಗಿದ್ದು, ಮಳೆ ಕಾಡುಗಳಲ್ಲಿ ವಾಸಿಸುತ್ತವೆ.
https://www.facebook.com/AkronZoo/videos/750915125740800