ಜನರಲ್ಲಿ ಕೊರೊನಾ ಲಸಿಕೆ ಸ್ವೀಕಾರವನ್ನ ಉತ್ತೇಜಿಸುವ ಸಲುವಾಗಿ ಅಮೆರಿಕದ ರಾಜ್ಯವೊಂದು ಕೋವಿಡ್ ಲಸಿಕೆ ಹಾಕಿಕೊಂಡವರಿಗೆ ಬಹುಮಾನ ನೀಡುತ್ತಿದೆ.
ವೆಸ್ಟ್ ವರ್ಜಿನಿಯಾ ಎಂಬಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡ 16 ರಿಂದ 35 ವರ್ಷ ವಯಸ್ಸಿನವರಿಗೆ 100 ಡಾಲರ್ ಹಣವನ್ನ ಬಹುಮಾನದ ರೂಪದಲ್ಲಿ ನೀಡಲಾಗ್ತಿದೆ.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ರಿಪಬ್ಲಿಕನ್ ಪಕ್ಷದ ಜಿಮ್ ಜಸ್ಟೀಸ್ ಈ ಬಗ್ಗೆ ಘೋಷಣೆ ಮಾಡಿದ್ದರು. ಕೊರೊನಾ ಲಸಿಕೆ ಸ್ವೀಕರಿಸಿದ ಯುವ ಜನತೆಗೆ 100 ಡಾಲರ್ ಹಣವನ್ನ ಬಹುಮಾನದ ರೂಪದಲ್ಲಿ ನೀಡುತ್ತೇವೆ ಎಂದು ಹೇಳಿದ್ದರು.
ಈ ಬಹುಮಾನದ ಪ್ಲಾನ್ ಬಳಿಕ 16 ರಿಂದ 35 ವರ್ಷದ ಒಳಗಿನವರು ಲಸಿಕೆ ಕೇಂದ್ರದತ್ತ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಭಾಗದಲ್ಲಿ ಯುವಜನತೆ ಲಸಿಕೆ ಹಾಕಿಕೊಳ್ಳಲು ಹಿಂದೇಟು ಹಾಕುತ್ತಿದ್ದುದೇ ಈ ಕ್ರಮವನ್ನ ಜಾರಿಗೆ ತರಲು ಕಾರಣವಾಗಿದೆ.