alex Certify ಮಗಳಿಗೆ ಧೈರ್ಯ ತುಂಬೋಕೆ ಈ ತಾಯಿ ಮಾಡಿದ ಕೆಲಸ ನೋಡಿದ್ರೆ ಭಾವುಕರಾಗೋದು ಗ್ಯಾರಂಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳಿಗೆ ಧೈರ್ಯ ತುಂಬೋಕೆ ಈ ತಾಯಿ ಮಾಡಿದ ಕೆಲಸ ನೋಡಿದ್ರೆ ಭಾವುಕರಾಗೋದು ಗ್ಯಾರಂಟಿ

ಕ್ಯಾನ್ಸರ್​ ರೋಗಿಗಳು ಕೀಮೋಥೆರಪಿಗೆ ಒಳಗಾಗುತ್ತಿದ್ದಂತೆಯೇ ತಮ್ಮ ತಲೆಗೂದಲನ್ನ ಕಳೆದುಕೊಳ್ತಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ. ಇದೇ ಕಾರಣದಿಂದ ಬಹುತೇಕ ಕ್ಯಾನ್ಸರ್​ ರೋಗಿಗಳು ತಮ್ಮ ರೂಪ ಹಾಳಾಯ್ತಲ್ಲ ಅಂತಾ ದುಃಖ ಪಡೋದಿದೆ. ಕೆಲವೊಬ್ಬರಂತೂ ಖಿನ್ನತೆಗೆ ಒಳಗಾಗಿಬಿಡ್ತಾರೆ.

ಕೊರೊನಾ ಲಸಿಕೆ ಕೊಡಿಸದ ವೈದ್ಯರಿಗೆ ಪತ್ನಿಯಿಂದ ಕ್ಲಾಸ್…! ವಿಡಿಯೋ ವೈರಲ್

ಇಂತಹ ಸಂದರ್ಭದಲ್ಲಿ ಕ್ಯಾನ್ಸರ್​ ರೋಗಿಗಳಿಗೆ ಕುಟುಂಬಸ್ಥರು ನೀಡುವ ಧೈರ್ಯ ಹಾಗೂ ಆತ್ಮವಿಶ್ವಾಸವೇ ಅವರನ್ನ ಈ ದುಃಖದಿಂದ ಹೊರಬರುವಂತೆ ಮಾಡೋಕೆ ಸಾಧ್ಯ. ಎಲ್ಲಾ ಪೋಷಕರು ತಮ್ಮ ಕೊನೆಗಾಲದಲ್ಲಿ ಮಕ್ಕಳು ತಮ್ಮನ್ನ ನೋಡಿಕೊಳ್ಳಲಿ ಎಂಬ ಆಸೆಯನ್ನ ಇಟ್ಟುಕೊಂಡಿರ್ತಾರೆ. ಆದರೆ ಇಲ್ಲೊಬ್ಬ ತಾಯಿ ಕ್ಯಾನ್ಸರ್​ ರೋಗಿಯಾದ ತನ್ನ ಮಗಳಿಗೆ ಆತ್ಮವಿಶ್ವಾಸ ತುಂಬಬೇಕು ಅಂತಾ ಮಾಡಿದ ಕೆಲಸ ನೋಡಿದ್ರೆ ನಿಮ್ಮ ಕಣ್ಣಂಚಲ್ಲಿ ನೀರೂರೋದು ಗ್ಯಾರಂಟಿ.

ಕ್ಯಾನ್ಸರ್​ ವಿರುದ್ಧ ಹೋರಾಡುತ್ತಿದ್ದ ಮಗಳು ತನ್ನ ತಲೆಗೂದಲನ್ನ ತೆಗೆದ ಬಳಿಕ ಆಕೆಗೆ ಬೇಸರವಾಗಬಾರದು ಅಂತಾ ತಾನೂ ಕೂಡ ತಲೆಕೂದಲನ್ನ ಸಂಪೂರ್ಣ ಕತ್ತರಿಸಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ತಾಯಿ – ಮಗಳ ಪ್ರೀತಿಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಮೂಕವಿಸ್ಮಿತರಾಗಿದ್ದಾರೆ.

ಪರಾಭವದ ನಂತರ​ ಟ್ರಂಪ್​ ನಿವಾಸದ ಎದುರು ಹಾರಾಡುತ್ತಿದೆ ಈ ಬ್ಯಾನರ್.​..!

ಕ್ಯಾನ್ಸರ್​ ರೋಗದಿಂದ ಬಳಲುತ್ತಿರುವ ಲುಸಿಯಾನಾ ರೆಬೆಲ್ಲೋ ಈ ವಿಡಿಯೋ ಶೇರ್​ ಮಾಡಿದ್ದು, ತಾಯಿ ಪ್ರೀತಿ ಅಂದರೆ ಇದು ಎಂದು ಶೀರ್ಷಿಕೆ ಬರೆದಿದ್ದಾರೆ.

6 ನಿಮಿಷಗಳ ವಿಡಿಯೋದಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ಸೇರಿ ರೆಬೆಲ್ಲೋ ತಲೆಗೂದಲನ್ನ ಶೇವ್​ ಮಾಡುತ್ತಿರ್ತಾರೆ. ಈ ಮಧ್ಯದಲ್ಲೇ ತಾಯಿ ಕ್ಯಾಮರವನ್ನೇ ನೋಡುತ್ತಾ ತನ್ನ ತಲೆಯ ಕೂದಲನ್ನೂ ಟ್ರಿಮ್​ ಮಾಡಿದ್ದಾರೆ. ಇದನ್ನ ನೋಡಿ ರೆಬೆಲ್ಲೋ ಶಾಕ್​ ಆಗಿದ್ದಾರೆ. ಬಳಿಕ ತಾಯಿ – ಮಗಳಿಬ್ಬರ ಕಣ್ಣಲ್ಲೂ ನೀರು ಜಿನುಗಿದೆ.

https://www.facebook.com/luciana.rebello.12/videos/3442802942512689/?t=0

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...