ಪಶ್ಚಿಮ ಟರ್ಕಿಯ ಕರಾವಳಿ ಭಾಗದಲ್ಲಿ ಭೂಕಂಪ ಸಂಭವಿಸಿದ ಬರೋಬ್ಬರಿ 91 ಗಂಟೆಗಳ ಬಳಿಕ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ 4 ವರ್ಷದ ಬಾಲಕಿಯನ್ನ ರಕ್ಷಣೆ ಮಾಡಲಾಗಿದೆ.
ಭೂಕಂಪ ನಡೆದ 91 ಗಂಟೆಗಳ ಬಳಿಕ ನಾವೆಲ್ಲ ಒಂದು ಪವಾಡಕ್ಕೆ ಸಾಕ್ಷಿಯಾಗಿದ್ದೇವೆ ಎಂದು ಟ್ವೀಟ್ ಮಾಡುವ ಮೂಲಕ ಇಜ್ಮಿರ್ ಮೇಯರ್ ಟಂಕ್ ಸೋಯರ್ ಈ ಮಾಹಿತಿ ಹಂಚಿಕೊಂಡಿದ್ದಾರೆ. ಟರ್ಕಿ ಭೂಕಂಪದಿಂದಾಗಿ ಈಗಾಗಲೇ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.