ಇರಾಕ್ನ ಬ್ಯಾಂಕ್ ಒಂದು ಎರಡನೇ ಮದುವೆಯಾಗಬಯಸುವ ಪೌರ ಕಾರ್ಮಿಕರಿಗೆ ಸಾಲ ಸೌಲಭ್ಯ ನೀಡೋದಾಗಿ ಘೋಷಣೆ ಮಾಡಿದೆ. ಇದು ಮಹಿಳಾ ಪರ ನ್ಯಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಅಲ್ ರಷೀದ್ ಹೆಸರಿನ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಒಂದು ಈ ರೀತಿಯ ಘೋಷಣೆ ಮಾಡಿದೆ. 2 ವರ್ಷಗಳ ಕಾಲ ಸಾರ್ವಜನಿಕ ಸೇವಾ ಇಲಾಖೆಯಲ್ಲಿ ಸೇವೆ ಸಲ್ಲಿಸಿದವರು ಈ ಸಾಲ ಸೌಲಭ್ಯ ಪಡೆಯಲು ಯೋಗ್ಯರಾಗಿರ್ತಾರೆ.
ಆದರೆ ಈ ಹಣವನ್ನ ಮೊದಲನೇ ಮದುವೆಗೆ ಬಳಸಿಕೊಳ್ಳುವಂತಿಲ್ಲ. ಎರಡನೇ ಮದುವೆಗೆ ಈ ಬ್ಯಾಂಕ್ 8389 ಡಾಲರ್ ಅಂದ್ರೆ 6,19,382 ರೂಪಾಯಿಯನ್ನ ಸಾಲ ರೂಪದಲ್ಲಿ ನೀಡಲಿದೆ.
ಇನ್ನು ಈ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಧಾನಿ ಕಚೇರಿಯ ಮಹಿಳಾ ಅಭಿವೃದ್ಧಿ ಸಲಹೆಗಾರ್ತಿ ಹನಾನ್ ಅಲ್ ಫತ್ಲಾವಿ, ಸರ್ಕಾರಿ ಬ್ಯಾಂಕ್ ಈ ರೀತಿಯ ಆಫರ್ ನೀಡಿರೋದು ನಾಚಿಕೆಗೇಡು ಅಂತಾ ಕೆಂಡಕಾರಿದ್ದಾರೆ.