alex Certify ಅಬ್ಬಬ್ಬಾ…..ಈತನಿಗಿರುವ ಪತ್ನಿಯರ ಸಂಖ್ಯೆ ಕೇಳಿದ್ರೆ ದಂಗಾಗ್ತೀರಾ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಬ್ಬಾ…..ಈತನಿಗಿರುವ ಪತ್ನಿಯರ ಸಂಖ್ಯೆ ಕೇಳಿದ್ರೆ ದಂಗಾಗ್ತೀರಾ…..!

ಪ್ರಪಂಚದ ಬಹುತೇಕ ರಾಷ್ಟ್ರಗಳ ಕಾನೂನಿನ ಪ್ರಕಾರ ಬಹುಪತ್ನಿತ್ವ ವ್ಯವಸ್ಥೆಗೆ ಅವಕಾಶವಿಲ್ಲ. ರಾಜ ಮಹಾರಾಜರ ಕಾಲದಲ್ಲಿದ್ದ ಈ ಪದ್ಧತಿ ಈಗ ಜಾರಿಯಲ್ಲಿಲ್ಲ. ಆದರೆ ಇಂದಿನ ಮಾರ್ಡನ್​ ಯುಗದಲ್ಲೂ ಕೆಲ ಸಮುದಾಯಗಳು ಬಹುಪತ್ನಿತ್ವಕ್ಕೆ ಅವಕಾಶ ನೀಡುತ್ತವೆ.

ಈಗಿನ ದುಬಾರಿ ದುನಿಯಾದಲ್ಲಿ ಒಂದು ಸಂಸಾರವನ್ನ ನಡೆಸೋದೇ ಹೆಚ್ಚಾಗಿರುತ್ತೆ. ಅಂತದ್ರಲ್ಲಿ ಕೆಲವರು ಡಜನ್​ಗಟ್ಟಲೇ ಸಂಸಾರವನ್ನ ನಡೆಸ್ತಾರೆ ಅಂದ್ರೆ ನಂಬಲಸಾಧ್ಯ. ಆದರೆ ಬಹುಪತ್ನಿತ್ವದ ಮೂಲಕವೇ ಜಗತ್ತಿನಾದ್ಯಂತ ಸುದ್ದಿ ಮಾಡಿದ ಕೆಲ ಪುಣ್ಯಾತ್ಮರ ವಿವರ ಇಲ್ಲಿದೆ ನೋಡಿ.

ಜಿಯೋನಾ : ಮಿಝೋರಾಂನ ನಿವಾಸಿಯಾದ ಇವರಿಗೆ ಬರೋಬ್ಬರಿ 39 ಪತ್ನಿಯರು. 180 ಮಂದಿ ಸದಸ್ಯರನ್ನ ಹೊಂದಿರುವ ಈ ಕುಟುಂಬದಲ್ಲಿ 94 ಮಕ್ಕಳು, 33 ಮೊಮ್ಮಕ್ಕಳು ಹಾಗೂ 14 ಸೊಸೆಯಂದಿರು ಇದ್ದಾರೆ.

ರುಲೂನ್​ ಟಿಂಪ್ಸೋನ್​ ಜೆಫ್ಸ್ : ಅಮೆರಿಕದ ಸ್ಥಳೀಯ ಮುಖಂಡನಾಗಿರುವ ಈತ 2002ರಲ್ಲಿ ಸಾವನ್ನಪ್ಪಿದ್ದಾನೆ. ಆದರೆ ಈತ ಬರೋಬ್ಬರಿ 75 ಮಂದಿಯನ್ನ ವಿವಾಹವಾಗಿದ್ದಾನೆ. ಬಹುಪತ್ನಿಯರನ್ನ ಹೊಂದಿರೋದನ್ನ ನಿಗೂಢವಾಗಿಯೇ ಇಟ್ಟಿದ್ದ ಈತ 65 ಮಕ್ಕಳನ್ನ ಹೊಂದಿದ್ದ. ಅಲ್ಲದೇ ಇವನು 14 ವರ್ಷಕ್ಕಿಂತ ಚಿಕ್ಕ ಮಕ್ಕಳನ್ನೂ ಮದುವೆಯಾಗಿದ್ದ.

ಸಲೇಹ್​ ಅಲ್​ ಸಯೇರಿ : ಸೌದಿ ಅರೇಬಿಯಾದ ಉದ್ಯಮಿ, 50 ವರ್ಷದಲ್ಲಿ 58 ಮಂದಿಯನ್ನ ಮದುವೆಯಾಗಿದ್ದಾನೆ. ಸಂದರ್ಶನವೊಂದರಲ್ಲಿ ಈತ ತನಗೆ ಕೆಲ ಪತ್ನಿಯರ ಹೆಸರು ಕೂಡ ನೆನಪಿಲ್ಲ ಎಂದು ಹೇಳಿಕೊಂಡಿದ್ದಾನೆ.

ವರ್ರೇನ್​​ ಜೆಫ್ಸ್ : ರುಲೋನ್​ ಟಿಂಪ್ಸನ್​​ ಜೆಫ್​ ಪುತ್ರನಾಗಿರುವ ಈತ ತನ್ನ ತಂದೆಯ ಮರಣದ ಬಳಿಕ ವಿಧವೆಯಾರದ ಕೆಲ ಮಹಿಳೆಯರನ್ನ ಮದುವೆಯಾಗಿದ್ದಾನೆ. ಎಲ್ಲಾ ಸೇರಿ ಈತನಿಗೆ 80 ಮಂದಿ ಪತ್ನಿಯರಿದ್ದಾರೆ. 250 ಮಕ್ಕಳನ್ನ ಹೊಂದಿರುವ ಈತ ಸದ್ಯ ಜೈಲಿನಲ್ಲಿದ್ದಾನೆ.

ಅಸೆಂಟಸ್​ ಓಗ್ವೆಲ್ಲಾ ಅಕುಕು : ಕೀನ್ಯಾ ನಿವಾಸಿಯಾಗಿರುವ ಈತ 100ಕ್ಕೂ ಹೆಚ್ಚು ಮಂದಿಯನ್ನ ಮದುವೆಯಾಗಿದ್ದ. ಈ ಮದುವೆಯಿಂದ 200ಕ್ಕೂ ಹೆಚ್ಚು ಮಕ್ಕಳನ್ನ ಪಡೆದಿದ್ದಾನೆ. 1939ರಲ್ಲಿ ಮೊದಲ ಬಾರಿಗೆ ಮದುವೆಯಾದ ಅಕುಕು ಬಳಿಕ ಮದುವೆಯಾಗುತ್ತಲೇ ಹೋಗಿದ್ದಾನೆ. 2010ರಲ್ಲಿ ತನ್ನ 92ನೇ ವರ್ಷಕ್ಕೆ ಅಸುನೀಗಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...