ಪ್ರಪಂಚದ ಬಹುತೇಕ ರಾಷ್ಟ್ರಗಳ ಕಾನೂನಿನ ಪ್ರಕಾರ ಬಹುಪತ್ನಿತ್ವ ವ್ಯವಸ್ಥೆಗೆ ಅವಕಾಶವಿಲ್ಲ. ರಾಜ ಮಹಾರಾಜರ ಕಾಲದಲ್ಲಿದ್ದ ಈ ಪದ್ಧತಿ ಈಗ ಜಾರಿಯಲ್ಲಿಲ್ಲ. ಆದರೆ ಇಂದಿನ ಮಾರ್ಡನ್ ಯುಗದಲ್ಲೂ ಕೆಲ ಸಮುದಾಯಗಳು ಬಹುಪತ್ನಿತ್ವಕ್ಕೆ ಅವಕಾಶ ನೀಡುತ್ತವೆ.
ಈಗಿನ ದುಬಾರಿ ದುನಿಯಾದಲ್ಲಿ ಒಂದು ಸಂಸಾರವನ್ನ ನಡೆಸೋದೇ ಹೆಚ್ಚಾಗಿರುತ್ತೆ. ಅಂತದ್ರಲ್ಲಿ ಕೆಲವರು ಡಜನ್ಗಟ್ಟಲೇ ಸಂಸಾರವನ್ನ ನಡೆಸ್ತಾರೆ ಅಂದ್ರೆ ನಂಬಲಸಾಧ್ಯ. ಆದರೆ ಬಹುಪತ್ನಿತ್ವದ ಮೂಲಕವೇ ಜಗತ್ತಿನಾದ್ಯಂತ ಸುದ್ದಿ ಮಾಡಿದ ಕೆಲ ಪುಣ್ಯಾತ್ಮರ ವಿವರ ಇಲ್ಲಿದೆ ನೋಡಿ.
ಜಿಯೋನಾ : ಮಿಝೋರಾಂನ ನಿವಾಸಿಯಾದ ಇವರಿಗೆ ಬರೋಬ್ಬರಿ 39 ಪತ್ನಿಯರು. 180 ಮಂದಿ ಸದಸ್ಯರನ್ನ ಹೊಂದಿರುವ ಈ ಕುಟುಂಬದಲ್ಲಿ 94 ಮಕ್ಕಳು, 33 ಮೊಮ್ಮಕ್ಕಳು ಹಾಗೂ 14 ಸೊಸೆಯಂದಿರು ಇದ್ದಾರೆ.
ರುಲೂನ್ ಟಿಂಪ್ಸೋನ್ ಜೆಫ್ಸ್ : ಅಮೆರಿಕದ ಸ್ಥಳೀಯ ಮುಖಂಡನಾಗಿರುವ ಈತ 2002ರಲ್ಲಿ ಸಾವನ್ನಪ್ಪಿದ್ದಾನೆ. ಆದರೆ ಈತ ಬರೋಬ್ಬರಿ 75 ಮಂದಿಯನ್ನ ವಿವಾಹವಾಗಿದ್ದಾನೆ. ಬಹುಪತ್ನಿಯರನ್ನ ಹೊಂದಿರೋದನ್ನ ನಿಗೂಢವಾಗಿಯೇ ಇಟ್ಟಿದ್ದ ಈತ 65 ಮಕ್ಕಳನ್ನ ಹೊಂದಿದ್ದ. ಅಲ್ಲದೇ ಇವನು 14 ವರ್ಷಕ್ಕಿಂತ ಚಿಕ್ಕ ಮಕ್ಕಳನ್ನೂ ಮದುವೆಯಾಗಿದ್ದ.
ಸಲೇಹ್ ಅಲ್ ಸಯೇರಿ : ಸೌದಿ ಅರೇಬಿಯಾದ ಉದ್ಯಮಿ, 50 ವರ್ಷದಲ್ಲಿ 58 ಮಂದಿಯನ್ನ ಮದುವೆಯಾಗಿದ್ದಾನೆ. ಸಂದರ್ಶನವೊಂದರಲ್ಲಿ ಈತ ತನಗೆ ಕೆಲ ಪತ್ನಿಯರ ಹೆಸರು ಕೂಡ ನೆನಪಿಲ್ಲ ಎಂದು ಹೇಳಿಕೊಂಡಿದ್ದಾನೆ.
ವರ್ರೇನ್ ಜೆಫ್ಸ್ : ರುಲೋನ್ ಟಿಂಪ್ಸನ್ ಜೆಫ್ ಪುತ್ರನಾಗಿರುವ ಈತ ತನ್ನ ತಂದೆಯ ಮರಣದ ಬಳಿಕ ವಿಧವೆಯಾರದ ಕೆಲ ಮಹಿಳೆಯರನ್ನ ಮದುವೆಯಾಗಿದ್ದಾನೆ. ಎಲ್ಲಾ ಸೇರಿ ಈತನಿಗೆ 80 ಮಂದಿ ಪತ್ನಿಯರಿದ್ದಾರೆ. 250 ಮಕ್ಕಳನ್ನ ಹೊಂದಿರುವ ಈತ ಸದ್ಯ ಜೈಲಿನಲ್ಲಿದ್ದಾನೆ.
ಅಸೆಂಟಸ್ ಓಗ್ವೆಲ್ಲಾ ಅಕುಕು : ಕೀನ್ಯಾ ನಿವಾಸಿಯಾಗಿರುವ ಈತ 100ಕ್ಕೂ ಹೆಚ್ಚು ಮಂದಿಯನ್ನ ಮದುವೆಯಾಗಿದ್ದ. ಈ ಮದುವೆಯಿಂದ 200ಕ್ಕೂ ಹೆಚ್ಚು ಮಕ್ಕಳನ್ನ ಪಡೆದಿದ್ದಾನೆ. 1939ರಲ್ಲಿ ಮೊದಲ ಬಾರಿಗೆ ಮದುವೆಯಾದ ಅಕುಕು ಬಳಿಕ ಮದುವೆಯಾಗುತ್ತಲೇ ಹೋಗಿದ್ದಾನೆ. 2010ರಲ್ಲಿ ತನ್ನ 92ನೇ ವರ್ಷಕ್ಕೆ ಅಸುನೀಗಿದ್ದಾನೆ.