alex Certify ತಲೆಗೆ ಕಲ್ಲಂಗಡಿ ಹಾಕಿಕೊಂಡು ಬಂದವರ ಕೆಲಸ ಕಂಡು ದಂಗಾದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆಗೆ ಕಲ್ಲಂಗಡಿ ಹಾಕಿಕೊಂಡು ಬಂದವರ ಕೆಲಸ ಕಂಡು ದಂಗಾದ ಜನ

ವೆಸ್ಟ್ ವರ್ಜೀನಿಯಾ, ಅಮೆರಿಕ: ಇದೆಂಥ ಮಾರ್ರೆ, ಕಲ್ಲಂಗಡಿ ತಲೆಯವರು ಬಂದು ಮಾಲ್ ನಲ್ಲಿ ಕದಿಯುವುದು ಎಂದರೆ ಏನು? ಹೌದು ಇಲ್ಲಾಗಿದ್ದೂ ಅದೇ ಈಗ ಈ ಖದೀಮರ ಕ್ರಿಯೇಟಿವ್ ಐಡಿಯಾಗೆ ಸಿಸಿ ಟಿವಿ ದೃಶ್ಯಾವಳಿ ಇದ್ದರೂ ಪೊಲೀಸರು ಕಕ್ಕಾಬಿಕ್ಕಿಯಾಗಿದ್ದರೂ, ನೆಟ್ಟಿಗರು ಮಾತ್ರ ಜೋಕ್ ಮಾಡಿ ನಗೆಗಡಲಲ್ಲಿ ತೇಲಿದ್ದಾರೆ.

ಅಮೆರಿಕದ ವೆಸ್ಟ್ ವರ್ಜೀನಿಯಾದಲ್ಲಿ ಮಾಲ್ ಒಂದರಲ್ಲಿ ಕಳ್ಳರು ಬಂದಿದ್ದಾರೆ. ಮುಖ ಪತ್ತೆ ಹಚ್ಚೋಣವೆಂದರೆ ಮಾಸ್ಕ್ ಹಾಕಿದ್ದಾರೆ. ಅವರು ಹಾಕಿದ್ದೇನು ಎನ್-95 ಕೊರೋನಾ ಮಾಸ್ಕ್ ಅಲ್ಲ. ಕಲ್ಲಂಗಡಿ ಹಣ್ಣಿನ ಮಾಸ್ಕ್ ಧರಿಸಿದ್ದು, ಅವರ ಕಣ್ಣುಗಳು ಮಾತ್ರ ಕಾಣುವಂತೆ ತೂತು ಮಾಡಿಕೊಂಡಿದ್ದರು.

ಹೀಗೆ ಲಗ್ಗೆ ಇಟ್ಟು ಕದ್ದುಕೊಂಡು ಹೋದ ಇಬ್ಬರ ಪತ್ತೆಗೆ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಈಗ ಈ ವಿಡಿಯೋ ಫೂಟೇಜ್ ಅನ್ನು ಪೊಲೀಸರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.

ಇದನ್ನು ನೋಡಿದ ನೆಟ್ಟಿಗರಲ್ಲಿ ಒಬ್ಬ “ಕಲ್ಲಂಗಡಿ ತಲೆಗಳು’’ ಎಂದು ಕರೆದಿದ್ದಾನೆ. ಈಗ ಎಲ್ಲ ತರದ ಮಾಸ್ಕ್ ಗಳು ಲಭ್ಯವಿದ್ದರೂ ಇವರು ಕಲ್ಲಂಗಡಿ ಹಣ್ಣಿನ ಮಾಸ್ಕ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆಂದು ಮಗದೊಬ್ಬ ಬರೆದುಕೊಂಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...