ಮೆಕ್ಸಿಕೋದಲ್ಲಿರುವ ಬಿಲ್ ಗೇಟ್ಸ್ ನಿರ್ಮಾಣದ ಕೆಸ್ಕೇಡ್ ಇನ್ವೆಸ್ಟ್ಮೆಂಟ್ನ 2 ದೈತ್ಯ ಕಂಪನಿಗಳನ್ನ ಮೆಲಿಂದಾ ಗೇಟ್ಸ್ಗೆ ವರ್ಗಾಯಿಸಲಾಗಿದೆ. ಈ ಮೂಲಕ ಬಿಲ್ ಗೇಟ್ಸ್ 2 ಬಿಲಿಯನ್ಗೂ ಅಧಿಕ ಮೊತ್ತದ ಆಸ್ತಿಯನ್ನ ಪಡೆದಂತಾಗಿದೆ.
ಬಿಲ್ ಗೇಟ್ಸ್ ತಮ್ಮ 27 ವರ್ಷದ ದಾಂಪತ್ಯ ಜೀವನವನ್ನ ಕೊನೆಗಾಣಿಸುತ್ತಿರೋದ್ರ ಬಗ್ಗೆ ಘೋಷಣೆ ಮಾಡಿದ ದಿನವೇ ಕ್ಯಾಸ್ಕೇಡ್ ಕೆನಡಿಯನ್ ನ್ಯಾಷನಲ್ ರೈಲ್ವೆ ಹಾಗೂ ಆಟೋನೇಷನ್ಗೆ 1.8 ಬಿಲಿಯನ್ ಷೇರುಗಳನ್ನ ಕ್ಯಾಸ್ಕೇಡ್ ವರ್ಗಾಯಿಸಿದೆ ಎಂದು ವರದಿಯಾಗಿದೆ.
ಇವರ ವಿಚ್ಛೇದನದ ಬಳಿಕ ಆಸ್ತಿ ಹಂಚಿಕೆಯಲ್ಲಿ ಯಾವ ರೀತಿಯ ಬೆಳವಣಿಗೆ ಉಂಟಾಗಬಹುದು ಎಂಬ ನಿರೀಕ್ಷೆ ಅನೇಕರಲ್ಲಿದೆ. ಬಿಲ್ ಹಾಗೂ ಮೆಲಿಂದಾ ಸಹಭಾಗಿತ್ವದಲ್ಲಿ ಬಿಲ್ & ಮೆಲಿಂದಾ ಗೇಟ್ಸ್ ಫೌಂಡೇಶನ್ ನಡೆಸುತ್ತಿದ್ದು ಇದರಲ್ಲಿ 50 ಬಿಲಿಯನ್ ಡಾಲರ್ ಮೌಲ್ಯದಲ್ಲಿ ಜಾಗತಿಕ ಆರೋಗ್ಯ, ಶಿಕ್ಷಣ, ಲಿಂಗ ಸಮಾನತೆ ಸೇರಿದಂತೆ ವಿವಿಧ ಕಾರ್ಯಗಳಿಗೆ ದೇಣಿಗೆ ನೀಡಲಾಗ್ತಿದೆ.
ಬಿಲ್ ಗೇಟ್ಸ್ರ ಅತ್ಯಂತ ದೊಡ್ಡ ಪ್ರಮಾಣದ ಆಸ್ತಿಯಲ್ಲಿ ಕ್ಯಾಸ್ಕೇಡ್ ಇನ್ವೆಸ್ಟ್ಮೆಂಟ್ ಕೂಡ ಒಂದು. ಮೈಕ್ರೋಸಾಫ್ಟ್ ಸ್ಟಾಕ್ ಮಾರಾಟ ಹಾಗೂ ಲಾಭದ ಆದಾಯದಿಂದ ಇದನ್ನು ರಚಿಸಲಾಗಿದೆ. ಕ್ಯಾಸ್ಕೇಡ್ ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಸಾರ್ವಜನಿಕ ಕಂಪನಿಗಳ ಆದಾಯ ಪಾಲನ್ನ ಒಳಗೊಂಡಿದೆ.