alex Certify ಬಿಲ್​ ಗೇಟ್ಸ್ – ಮೆಲಿಂದಾ ದಾಂಪತ್ಯ ಜೀವನ ಅಂತ್ಯ: ಗೇಟ್ಸ್​ಗೆ ಸೇರಿದ ದೈತ್ಯ ಕಂಪನಿಯ ಷೇರು ಮೆಲಿಂದಾ ಪಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಲ್​ ಗೇಟ್ಸ್ – ಮೆಲಿಂದಾ ದಾಂಪತ್ಯ ಜೀವನ ಅಂತ್ಯ: ಗೇಟ್ಸ್​ಗೆ ಸೇರಿದ ದೈತ್ಯ ಕಂಪನಿಯ ಷೇರು ಮೆಲಿಂದಾ ಪಾಲು

ಮೆಕ್ಸಿಕೋದಲ್ಲಿರುವ ಬಿಲ್​ ಗೇಟ್ಸ್ ನಿರ್ಮಾಣದ ಕೆಸ್ಕೇಡ್​​ ಇನ್​​ವೆಸ್ಟ್​​ಮೆಂಟ್​ನ 2 ದೈತ್ಯ ಕಂಪನಿಗಳನ್ನ ಮೆಲಿಂದಾ ಗೇಟ್ಸ್​ಗೆ ವರ್ಗಾಯಿಸಲಾಗಿದೆ. ಈ ಮೂಲಕ ಬಿಲ್​ ಗೇಟ್ಸ್​ 2 ಬಿಲಿಯನ್​ಗೂ ಅಧಿಕ ಮೊತ್ತದ ಆಸ್ತಿಯನ್ನ ಪಡೆದಂತಾಗಿದೆ.

ಬಿಲ್​​ ಗೇಟ್ಸ್ ತಮ್ಮ 27 ವರ್ಷದ ದಾಂಪತ್ಯ ಜೀವನವನ್ನ ಕೊನೆಗಾಣಿಸುತ್ತಿರೋದ್ರ ಬಗ್ಗೆ ಘೋಷಣೆ ಮಾಡಿದ ದಿನವೇ ಕ್ಯಾಸ್ಕೇಡ್​ ಕೆನಡಿಯನ್​ ನ್ಯಾಷನಲ್​ ರೈಲ್ವೆ ಹಾಗೂ ಆಟೋನೇಷನ್​​​ಗೆ 1.8 ಬಿಲಿಯನ್​ ಷೇರುಗಳನ್ನ ಕ್ಯಾಸ್ಕೇಡ್​ ವರ್ಗಾಯಿಸಿದೆ ಎಂದು ವರದಿಯಾಗಿದೆ.

ಇವರ ವಿಚ್ಛೇದನದ ಬಳಿಕ ಆಸ್ತಿ ಹಂಚಿಕೆಯಲ್ಲಿ ಯಾವ ರೀತಿಯ ಬೆಳವಣಿಗೆ ಉಂಟಾಗಬಹುದು ಎಂಬ ನಿರೀಕ್ಷೆ ಅನೇಕರಲ್ಲಿದೆ. ಬಿಲ್​ ಹಾಗೂ ಮೆಲಿಂದಾ ಸಹಭಾಗಿತ್ವದಲ್ಲಿ ಬಿಲ್​ & ಮೆಲಿಂದಾ ಗೇಟ್ಸ್ ಫೌಂಡೇಶನ್​ ನಡೆಸುತ್ತಿದ್ದು ಇದರಲ್ಲಿ 50 ಬಿಲಿಯನ್​ ಡಾಲರ್​ ಮೌಲ್ಯದಲ್ಲಿ ಜಾಗತಿಕ ಆರೋಗ್ಯ, ಶಿಕ್ಷಣ, ಲಿಂಗ ಸಮಾನತೆ ಸೇರಿದಂತೆ ವಿವಿಧ ಕಾರ್ಯಗಳಿಗೆ ದೇಣಿಗೆ ನೀಡಲಾಗ್ತಿದೆ.

ಬಿಲ್​​ ಗೇಟ್ಸ್​ರ ಅತ್ಯಂತ ದೊಡ್ಡ ಪ್ರಮಾಣದ ಆಸ್ತಿಯಲ್ಲಿ ಕ್ಯಾಸ್ಕೇಡ್​ ಇನ್​ವೆಸ್ಟ್​ಮೆಂಟ್​ ಕೂಡ ಒಂದು. ಮೈಕ್ರೋಸಾಫ್ಟ್​ ಸ್ಟಾಕ್​ ಮಾರಾಟ ಹಾಗೂ ಲಾಭದ ಆದಾಯದಿಂದ ಇದನ್ನು ರಚಿಸಲಾಗಿದೆ. ಕ್ಯಾಸ್ಕೇಡ್​ ರಿಯಲ್​ ಎಸ್ಟೇಟ್​ ಸೇರಿದಂತೆ ವಿವಿಧ ಸಾರ್ವಜನಿಕ ಕಂಪನಿಗಳ ಆದಾಯ ಪಾಲನ್ನ ಒಳಗೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...