alex Certify ಚಿತ್ರ ಬಿಡಿಸಿ ಸಾವಿರ ಪೌಂಡ್ ಗಳಿಸಿದ ಇಲಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿತ್ರ ಬಿಡಿಸಿ ಸಾವಿರ ಪೌಂಡ್ ಗಳಿಸಿದ ಇಲಿ…!

ಇಲಿಯೊಂದು ಚಿತ್ರ ರಚನೆ ಮಾಡಿ 1000 ಪೌಂಡ್ ಆದಾಯ ಗಳಿಸಿರುವ ವಿಚಿತ್ರವಾದ ಪ್ರಸಂಗವೊಂದು ನಡೆದಿದೆ.

ಗಸ್ ಸಾಮಾನ್ಯ ಇಲಿಯಲ್ಲ, ಅವನು ಶ್ರೀಮಂತ ಇಲಿ. ಚಿತ್ರಕಲೆ ಮೂಲಕ ಸಾಕಷ್ಟು ಹಣ ಸಂಪಾದಿಸುವಲ್ಲಿ ಯಶಸ್ವಿಯಾಗಿದೆಯಂತೆ.

ಇಲಿ ಮಾಲೀಕರಾದ ಜಸ್ಟ್ ಇಂಡ್ಸೆತ್ ಹೇಳುವಂತೆ, ಬಣ್ಣ ಹಚ್ಚಿದ ತನ್ನ ಕಾಲನ್ನು ಬಳಸಿ ಇಲಿಯು ಬಿಳಿಯ ಕಾಗದದ ಮೇಲೆ ಅತ್ತಿಂದಿತ್ತ ಓಡಾಡಿದಾಗ ರಚಿತವಾಗುವ ಕಲಾಕೃತಿಗೆ ಸಾಕಷ್ಟು ಬೆಲೆ ಬಂದಿದೆಯಂತೆ.

ಈ ಪುಟ್ಟ ಕಲಾವಿದನ ಪ್ರತಿಭೆಯನ್ನು ಪೋಷಿಸುವ ಸಲುವಾಗಿ ಆಕೆಯು ವಿಷಕಾರಿಯಲ್ಲದ ಬಣ್ಣಗಳು ಮತ್ತು ಮಿನಿ ಕ್ಯಾನ್ವಾಸ್ ಗಳನ್ನು ಬಳಸಿ ಕಲಾಕೃತಿಗೆ ರಚನೆಗೆ ಸಹಕಾರಿಯಾದರು. ಆಕೆ ಮಾಡಿರುವ ವಿಡಿಯೋದಲ್ಲಿ ಇಲಿ ಕಲಾಕೃತಿ ರಚಿಸುವುದನ್ನು ಕಾಣಬಹುದಾಗಿದೆ.‌

ಇನ್ನೊಂದು ವಿಶೇಷ ಸಂಗತಿಯೆಂದರೆ ಇಲಿಯ ಕಲಾಕೃತಿ ದಕ್ಷಿಣ ಕೊರಿಯಾ, ಆಸ್ಟ್ರೇಲಿಯ ಸೇರಿ ವಿವಿಧ ದೇಶಗಳಲ್ಲಿ ಮಾರಾಟವಾಗಿದೆ. ಒಟ್ಟಾರೆ 1000 ಪೌಂಡ್ ಗಿಂತಲೂ ಹೆಚ್ಚು ಆದಾಯವನ್ನು ಈ ಇಲಿ ಗಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...