alex Certify ದಂಗಾಗಿಸುತ್ತೆ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲು ಇವರು ಪಾವತಿಸಿದ ಮೊತ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲು ಇವರು ಪಾವತಿಸಿದ ಮೊತ್ತ

ಪ್ರವಾಸಕ್ಕೆ ಹೋಗಬೇಕು ಅಂದರೆ ಅಬ್ಬಬ್ಬಾ ಅಂದ್ರೆ ಎಷ್ಟು ಹಣ ಖರ್ಚಾಗಬಹುದು. ದೂರದ ಮಾಲ್ಡೀವ್ಸ್​ಗೆ ಪ್ರಯಾಣ ಮಾಡುತ್ತೇನೆ ಅಂದರೂ ಕೋಟಿಗಟ್ಟಲೇ ರೂಪಾಯಿ ಖರ್ಚು ಆಗೋದಿಲ್ಲ.

ಆದರೆ ಇಲ್ಲೊಂದಿಷ್ಟು ಶ್ರೀಮಂತ ಮಂದಿ 8 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗಲಿಕ್ಕಾಗಿ ಪ್ರತಿ ವ್ಯಕ್ತಿ ಬರೋಬ್ಬರಿ 4,00,98,04,205 ರೂಪಾಯಿ ಮೌಲ್ಯದ ಟಿಕೆಟ್​ಗಳನ್ನ ಖರೀದಿ ಮಾಡಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವರ್ಷದ ಆರಂಭದಲ್ಲಿ ಲ್ಯಾರ್ರಿ ಕೊನ್ನೊರ್​, ಮಾರ್ಕ್ ಪಾತಿ, ಏಯ್ಟನ್​ ಸ್ಟೈಬ್​ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಪ್ರಯಾಣ ಬೆಳಸಲಿದ್ದಾರೆ.

ಅಮೆರಿಕದಲ್ಲೂ ಪ್ರತಿಧ್ವನಿಸಿದ ಭಾರತದ ರೈತ ಹೋರಾಟ: ರಾಯಭಾರ ಕಚೇರಿ ಎದುರು ‘ಖಲಿಸ್ತಾನ್’ ಗುಂಪುಗಳ ಪ್ರತಿಭಟನೆ

ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್​ ಎಕ್ಸ್ ಡ್ರ್ಯಾಗನ್​ ಬಾಹ್ಯಾಕಾಶ ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ 8 ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ. ಈ ಮೂಲಕ ಐಎಸ್​ಎಸ್​ಗೆ ಪ್ರಯಾಣ ಬೆಳೆಸಿದ ಮೊದಲ ಖಾಸಗಿ ವ್ಯಕ್ತಿಗಳು ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.

ಇನ್ನು ಈ ಬಾಹ್ಯಾಕಾಶ ಪ್ರವಾಸಿಗರಿಗೆ ನಾಸಾದ ಮಾಜಿ ಗಗನಯಾತ್ರಿ ಮೈಕಲ್​ ಲೋಪೆಜ್​​ ಅಲೆಗ್ರಿಯಾ ಸಾಥ್​ ನೀಡಲಿದ್ದಾರೆ. ಇವರು ಈವರೆಗೆ ನಾಲ್ಕು ಬಾರಿ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದಾರೆ. ಪ್ರಸ್ತುತ ಹೂಸ್ಟನ್​ ಮೂಲದ ಆಕ್ಸಿಯಂ ಸ್ಪೇಸ್ ಉಪಾಧ್ಯಕ್ಷರಾಗಿದ್ದಾರೆ. ಹಾಗೂ ಮಿಷನ್​ ಕಮಾಂಡರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...