ಪ್ರವಾಸಕ್ಕೆ ಹೋಗಬೇಕು ಅಂದರೆ ಅಬ್ಬಬ್ಬಾ ಅಂದ್ರೆ ಎಷ್ಟು ಹಣ ಖರ್ಚಾಗಬಹುದು. ದೂರದ ಮಾಲ್ಡೀವ್ಸ್ಗೆ ಪ್ರಯಾಣ ಮಾಡುತ್ತೇನೆ ಅಂದರೂ ಕೋಟಿಗಟ್ಟಲೇ ರೂಪಾಯಿ ಖರ್ಚು ಆಗೋದಿಲ್ಲ.
ಆದರೆ ಇಲ್ಲೊಂದಿಷ್ಟು ಶ್ರೀಮಂತ ಮಂದಿ 8 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗಲಿಕ್ಕಾಗಿ ಪ್ರತಿ ವ್ಯಕ್ತಿ ಬರೋಬ್ಬರಿ 4,00,98,04,205 ರೂಪಾಯಿ ಮೌಲ್ಯದ ಟಿಕೆಟ್ಗಳನ್ನ ಖರೀದಿ ಮಾಡಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವರ್ಷದ ಆರಂಭದಲ್ಲಿ ಲ್ಯಾರ್ರಿ ಕೊನ್ನೊರ್, ಮಾರ್ಕ್ ಪಾತಿ, ಏಯ್ಟನ್ ಸ್ಟೈಬ್ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಪ್ರಯಾಣ ಬೆಳಸಲಿದ್ದಾರೆ.
ಅಮೆರಿಕದಲ್ಲೂ ಪ್ರತಿಧ್ವನಿಸಿದ ಭಾರತದ ರೈತ ಹೋರಾಟ: ರಾಯಭಾರ ಕಚೇರಿ ಎದುರು ‘ಖಲಿಸ್ತಾನ್’ ಗುಂಪುಗಳ ಪ್ರತಿಭಟನೆ
ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್ ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ 8 ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ. ಈ ಮೂಲಕ ಐಎಸ್ಎಸ್ಗೆ ಪ್ರಯಾಣ ಬೆಳೆಸಿದ ಮೊದಲ ಖಾಸಗಿ ವ್ಯಕ್ತಿಗಳು ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.
ಇನ್ನು ಈ ಬಾಹ್ಯಾಕಾಶ ಪ್ರವಾಸಿಗರಿಗೆ ನಾಸಾದ ಮಾಜಿ ಗಗನಯಾತ್ರಿ ಮೈಕಲ್ ಲೋಪೆಜ್ ಅಲೆಗ್ರಿಯಾ ಸಾಥ್ ನೀಡಲಿದ್ದಾರೆ. ಇವರು ಈವರೆಗೆ ನಾಲ್ಕು ಬಾರಿ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದಾರೆ. ಪ್ರಸ್ತುತ ಹೂಸ್ಟನ್ ಮೂಲದ ಆಕ್ಸಿಯಂ ಸ್ಪೇಸ್ ಉಪಾಧ್ಯಕ್ಷರಾಗಿದ್ದಾರೆ. ಹಾಗೂ ಮಿಷನ್ ಕಮಾಂಡರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.