alex Certify ಸಾವಿರಾರು ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿದ ಚಾಲಕನಿಗೆ ವಿಶಿಷ್ಟ ಗೌರವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವಿರಾರು ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿದ ಚಾಲಕನಿಗೆ ವಿಶಿಷ್ಟ ಗೌರವ

ಸ್ಪೇನ್: ಕರೋನಾ ಸಮಯದಲ್ಲಿ ನಿರಂತರವಾಗಿ ಸಾವಿರಾರು ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿದ ಸ್ಪೇನ್ ನ ಟ್ಯಾಕ್ಸಿ ಚಾಲಕನೊಬ್ಬ ಆಸ್ಪತ್ರೆಯ ಸಿಬ್ಬಂದಿಯ ಗೌರವಕ್ಕೆ ಪಾತ್ರನಾಗಿದ್ದಾನೆ.‌

ಆತನನ್ನು ಆಸ್ಪತ್ರೆಗೆ ಕರೆಸಿದ ವೈದ್ಯರು, ವೈದ್ಯಕೀಯ ಸಿಬ್ಬಂದಿ ಆತನ ಕಾರ್ಯಕ್ಕೆ ಚಪ್ಪಾಳೆ ತಟ್ಟಿ ಗೌರವ ಸೂಚಿಸಿದ್ದಾರೆ. ಅಲ್ಲದೆ, ಒಂದಿಷ್ಟು ಹಣ ಸಂಗ್ರಹಿಸಿ ನೀಡಿದ್ದಾರೆ.

ಅಕಸ್ಮಾತ್ ಸಿಕ್ಕ ಈ ಗೌರವದಿಂದ ಭಾವುಕನಾದ ಚಾಲಕ‌ ಮೂಕ ವಿಸ್ಮಿತನಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಆತನ‌ ಹೆಸರು ಮಾತ್ರ ಇನ್ನೂ ತಿಳಿದು ಬಂದಿಲ್ಲ.

ಕರೋನಾ ಸಮಯದಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ದೊರೆಯುತ್ತಿದೆ. ಅವರ ಜತೆ ಚಾಲಕರು, ಸಫಾಯಿ ಕರ್ಮಚಾರಿಗಳು, ಕಿರಾಣಿ ಅಂಗಡಿಗಳವರು, ಔಷಧ ಅಂಗಡಿಗಳವರು ನಿರಂತರವಾಗಿ ಜನರ ಸೇವೆಗೆ ಶ್ರಮಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...