ಮೆಕ್ಡೊನಾಲ್ಡ್ನಲ್ಲಿ ಆಹಾರ ಖರೀದಿ ಮಾಡುತ್ತಿದ್ದ ವೇಳೆ ತಾಳ್ಮೆಯಿಲ್ಲದವರಂತೆ ವರ್ತಿಸಿದ ಮಹಿಳೆಯ ವಿರುದ್ಧ ಗ್ರಾಹಕರೊಬ್ಬರು ಚೆನ್ನಾಗಿಯೇ ದ್ವೇಷ ತೀರಿಸಿಕೊಂಡಿದ್ದಾರೆ. ತಾನು ಯಾವ ರೀತಿಯಲ್ಲಿ ಮಹಿಳೆಯ ವಿರುದ್ಧ ರಿವೇಂಜ್ ತೀರಿಸಿಕೊಂಡೆ ಅನ್ನೋದನ್ನ ವ್ಯಕ್ತಿ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದು ಸಖತ್ ವೈರಲ್ ಆಗಿದೆ.
ನಾನು ನನ್ನ ಆಹಾರವನ್ನ ಆರ್ಡರ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ತಿದ್ದ ಕಾರಣ ನನ್ನ ಹಿಂದೆಯೇ ಸಾಲಿನಲ್ಲಿ ನಿಂತಿದ್ದ ಮಹಿಳೆ ತಾಳ್ಮೆ ಇಲ್ಲದವಳಂತೆ ವರ್ತಿಸುತ್ತಿದ್ದಳು. ನಾನು ಫುಡ್ಗೆ ಬಿಲ್ ಪಾವತಿಸಿದ ಬಳಿಕ ಆಹಾರವನ್ನ ಪಡೆಯಲು ಇನ್ನೊಂದು ಸಾಲಿಗೆ ಹೋಗಿದ್ದೆ. ಮಹಿಳೆಗೆ ಕ್ಯಾಶಿಯರ್ ನಿಮ್ಮ ಆರ್ಡರ್ನ ಹಣವನ್ನ ನಾನು ಪಾವತಿ ಮಾಡಿದ್ದೇನೆ ಅನ್ನೋದನ್ನ ಹೇಳಿದ್ರು. ಕೂಡಲೇ ಮಹಿಳೆ ನನ್ನ ಬಳಿ ತಿರುಗಿ ನೋಡಿದಳು. ಆಕೆಯ ವರ್ತನೆಯ ಮೂಲಕವೇ ಆಕೆ ಮುಜುಗರಕ್ಕೆ ಒಳಗಾಗಿದ್ದಳು ಅನ್ನೋದು ಸ್ಪಷ್ಟವಾಗಿ ತಿಳಿಯುತ್ತಿತ್ತು.
ಕೊರೊನಾ ನಿಯಂತ್ರಣಕ್ಕೆ ಜಾರಿಯಾಗಿದೆ ವಿಚಿತ್ರ ನಿಯಮ: ಒಂದು ಗಂಟೆ ಮಾರುಕಟ್ಟೆಯಲ್ಲಿದ್ರೆ ಬೀಳಲಿದೆ ದಂಡ
ಆದರೆ ನಿಜವಾದ ಮಜಾ ಸಿಕ್ಕಿದ್ದು ಫುಡ್ನ್ನು ತೆಗೆದುಕೊಳ್ಳುವ ವೇಳೆ……ನಾನು ನನ್ನ ಆರ್ಡರ್ ಫುಡ್ನ ಜೊತೆಗೆ ಆಕೆ ಆರ್ಡರ್ ಮಾಡಿದ್ದ ಫುಡ್ನ್ನೂ ತೆಗೆದುಕೊಂಡಿದ್ದೆ. ಆಕೆ ಬೆರಗುಗಣ್ಣಿನಿಂದ ನನ್ನನ್ನ ನೋಡ್ತಿದ್ಲು. ನಾನು ಬಿಲ್ ಪಾವತಿ ಮಾಡಿದ ಫುಡ್ನ್ನು ತೆಗೆದುಕೊಂಡೆ ಎಂದು ಆಕೆ ಬಳಿ ಹೇಳಿದೆ. ಆಕೆ ಈಗ ಪುನಃ ಉದ್ದದ ಸಾಲಿನಲ್ಲಿ ನಿಂತು ಫುಡ್ ಆರ್ಡರ್ ಮಾಡಬೇಕು. ಆಕೆ ಇಂದು ಒಳ್ಳೆಯ ಪಾಠವನ್ನೇ ಕಲಿತಿದ್ದಾಳೆ ಎಂದು ಘಟನೆಯನ್ನ ವಿವರಿಸಿದ್ರು.