ಈಸ್ಟರ್ ಹಬ್ಬ ಅಂದರೆ ಸಾಕು ಅದು ಚಾಕಲೇಟ್ಗಳ ಹಬ್ಬ. ಸ್ನೇಹಿತರು ಹಾಗೂ ಸಂಬಂಧಿಗಳ ಜೊತೆ ಅಮೂಲ್ಯ ಕ್ಷಣವನ್ನ ಕಳೆಯುವಂತಹ ಹಬ್ಬ. ಅದೇ ರೀತಿ ಯುಟ್ಯೂಬರ್ ಮಾಕ್ಸ್ ಸ್ಟ್ಯಾಂಡ್ಫೋರ್ಡ್ ಕೂಡ ಈಸ್ಟರ್ ಹಬ್ಬವನ್ನ ಆಚರಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಮ್ಯಾಕ್ಸ್ ಕೇವಲ 24 ನಿಮಿಷಗಳಲ್ಲಿ ಬರೋಬ್ಬರಿ 50 ಕ್ಯಾಡ್ಬರಿ ಕ್ರೀಮ್ ಎಗ್ಸ್ ತಿಂದು ತೇಗಿದ್ದಾರೆ. ಈ ಫುಡ್ ಚಾಲೆಂಜ್ ವಿಡಿಯೋವನ್ನ ಮ್ಯಾಕ್ಸ್ ತಮ್ಮ ಯುಟ್ಯೂಬ್ ಚಾನೆಲ್ ಮ್ಯಾಕ್ಸ್ ವರ್ಸಸ್ ಫುಡ್ನಲ್ಲಿ ಹರಿಬಿಟ್ಟಿದ್ದಾರೆ.
ಈ ಚಿತ್ರದಲ್ಲಿರುವ ಕೋಲಾ ಕ್ಯಾನ್ಗಳೆಷ್ಟು….? ನಿಮ್ಮ ಗ್ರಹಿಕೆಗೆ ಇಲ್ಲಿದೆ ಒಂದು ಸವಾಲ್
50 ಕ್ರೀಮ್ ಎಗ್ನಲ್ಲಿ ಹೆಚ್ಚು ಕಡಿಮೆ 1.3 ಕೆಜಿ ಸಕ್ಕರೆ ಅಂಶವಿದೆ. ಆದರೆ ನೀರನ್ನ ಕುಡಿಯುತ್ತಾ ಬಳಿಕ ಈ ಚಾಕಲೇಟ್ನ್ನು ತಿನ್ನುವ ಮೂಲಕ ಮ್ಯಾಕ್ಸ್ ಈ ಚಾಲೆಂಜ್ ಪೂರ್ತಿ ಮಾಡಿದ್ದಾರೆ. ಇದು ತುಂಬಾ ಗಟ್ಟಿಯಾಗಿದೆ. ನೀವು ಸರಿಯಾಗಿ ಅಗಿದೇ ತಿನ್ನಬೇಕು. ಮಧ್ಯದಲ್ಲಿ ಸಿಕ್ಕಾಪಟ್ಟೆ ಸಿಹಿಯ ಅಂಶವಿದೆ. ಅಲ್ಲದೇ ಚಾಕಲೇಟ್ನ್ನು ಬೇಗ ಬೇಗ ತಿನ್ನೋದು ಒಂದು ಕಷ್ಟದ ಕೆಲಸ ಎಂದು ಮ್ಯಾಕ್ಸ್ ತಮ್ಮ ಅನುಭವವನ್ನ ಹೇಳಿದ್ದಾರೆ.