ಕೊರೊನಾ ವೈರಸ್ ಮುಂಜಾಗ್ರತ ಕ್ರಮಗಳ ವಿಚಾರದಲ್ಲಿ ತಪ್ಪು ಸಂದೇಶ ರವಾನಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಮುಖ್ಯ ಸಲಹೆಗಾರ ಟ್ವೀಟ್ನ ಟ್ವಿಟರ್ ಸಂಸ್ಥೆ ಅಳಿಸಿ ಹಾಕಿದೆ.
ಡೊನಾಲ್ಡ್ ಟ್ರಂಪ್ರ ಮುಖ್ಯ ಕೊರೊನಾ ಸಲಹೆಗಾರ ಡಾ, ಸ್ಕಾಟ್ ಅಟ್ಲಾಸ್, ಮಾಸ್ಕ್ಗಳಿಂದ ಯಾವುದೇ ಲಾಭವಿಲ್ಲ ಅಂತಾ ಟ್ವೀಟ್ ಮಾಡಿದ್ರು. ಇದು ಕೊರೊನಾ ವಿರುದ್ಧದ ತಪ್ಪು ಸಂದೇಶ ಎಂದು ಪರಿಗಣಿಸಿದ ಟ್ವಿಟರ್ ಸಂಸ್ಥೆ ಈ ಟ್ವೀಟ್ನ್ನು ಅಳಿಸಿ ಹಾಕಿದೆ.
ನವೆಂಬರ್ 3ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೇ ಬಾರಿಗೆ ಕಣಕ್ಕಿಳಿದಿರೋ ಟ್ರಂಪ್ ಜೋ ಬಿಡೆನ್ರನ್ನ ಸೋಲಿಸೋಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಸಾರ್ವಜನಿಕ ಸಮಾವೇಶಗಳಲ್ಲಿ ಟ್ರಂಪ್ ಭಾಗಿಯಾಗಿದ್ದಾರೆ. ಆದರೆ ಟ್ರಂಪ್ ಭಾಗಿಯಾದ ಬಹುತೇಕ ಸಮಾವೇಶಗಳಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸದೇ ಇರೋ ದೃಶ್ಯ ಕಂಡು ಬಂದಿದೆ.