alex Certify ಟ್ರಂಪ್​ ಸಲಹೆಗಾರನ ಟ್ವೀಟ್​ ಅಳಿಸಿದ ಟ್ವಿಟರ್​ ಸಂಸ್ಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಂಪ್​ ಸಲಹೆಗಾರನ ಟ್ವೀಟ್​ ಅಳಿಸಿದ ಟ್ವಿಟರ್​ ಸಂಸ್ಥೆ

ಕೊರೊನಾ ವೈರಸ್​ ಮುಂಜಾಗ್ರತ ಕ್ರಮಗಳ ವಿಚಾರದಲ್ಲಿ ತಪ್ಪು ಸಂದೇಶ ರವಾನಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಮುಖ್ಯ ಸಲಹೆಗಾರ ಟ್ವೀಟ್​​ನ ಟ್ವಿಟರ್​ ಸಂಸ್ಥೆ ಅಳಿಸಿ ಹಾಕಿದೆ.

ಡೊನಾಲ್ಡ್​ ಟ್ರಂಪ್​ರ ಮುಖ್ಯ ಕೊರೊನಾ ಸಲಹೆಗಾರ ಡಾ, ಸ್ಕಾಟ್​ ಅಟ್ಲಾಸ್,​​ ಮಾಸ್ಕ್​ಗಳಿಂದ ಯಾವುದೇ ಲಾಭವಿಲ್ಲ ಅಂತಾ ಟ್ವೀಟ್​ ಮಾಡಿದ್ರು. ಇದು ಕೊರೊನಾ ವಿರುದ್ಧದ ತಪ್ಪು ಸಂದೇಶ ಎಂದು ಪರಿಗಣಿಸಿದ ಟ್ವಿಟರ್​ ಸಂಸ್ಥೆ ಈ ಟ್ವೀಟ್​ನ್ನು ಅಳಿಸಿ ಹಾಕಿದೆ.

ನವೆಂಬರ್​​ 3ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೇ ಬಾರಿಗೆ ಕಣಕ್ಕಿಳಿದಿರೋ ಟ್ರಂಪ್​ ಜೋ ಬಿಡೆನ್​ರನ್ನ ಸೋಲಿಸೋಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಸಾರ್ವಜನಿಕ ಸಮಾವೇಶಗಳಲ್ಲಿ ಟ್ರಂಪ್​ ಭಾಗಿಯಾಗಿದ್ದಾರೆ. ಆದರೆ ಟ್ರಂಪ್​ ಭಾಗಿಯಾದ ಬಹುತೇಕ ಸಮಾವೇಶಗಳಲ್ಲಿ ಸಾರ್ವಜನಿಕರು ಮಾಸ್ಕ್​ ಧರಿಸದೇ ಇರೋ ದೃಶ್ಯ ಕಂಡು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...