alex Certify ಪ್ರತಿಷ್ಟಿತ ಆಸ್ಪತ್ರೆ ಎದುರು ಮಾಸ್ಕ್​ ಧರಿಸದೇ ಪ್ರೊಟೆಸ್ಟ್: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಷ್ಟಿತ ಆಸ್ಪತ್ರೆ ಎದುರು ಮಾಸ್ಕ್​ ಧರಿಸದೇ ಪ್ರೊಟೆಸ್ಟ್: ವಿಡಿಯೋ ವೈರಲ್

ಕೊರೊನಾ ವೈರಸ್​ ಸಂಕಷ್ಟ ವಿಶ್ವಕ್ಕೆ ಬಾಧಿಸಿ ವರ್ಷಗಳೇ ಸಮೀಪಿಸುತ್ತಾ ಬಂದರೂ ಸಹ ಇನ್ನು ಈ ಸಾಂಕ್ರಾಮಿಕದ ಭಯ ದೂರವಾಗಿಲ್ಲ. ಕೊರೊನಾ ನಿಯಂತ್ರಣ ಮಾಡಬೇಕೆಂದು ಆಯಾ ಸರ್ಕಾರಗಳು ಲಾಕ್​ಡೌನ್​, ಮಾಸ್ಕ್​ ಹಾಗೂ ಸಾಮಾಜಿಕ ಅಂತರ ಕಡ್ಡಾಯ ಹೀಗೆ ಸಾಕಷ್ಟು ನಿಯಮಗಳನ್ನ ಜಾರಿಗೆ ತಂದಿದೆ. ಆದಾಗ್ಯೂ ಕೆಲವರು ಸರ್ಕಾರದ ನಿಯಮಗಳನ್ನ ಉಲ್ಲಂಘಿಸಿ ಬೇಜವಾಬ್ದಾರಿತನವನ್ನ ತೋರುತ್ತಲೇ ಇದ್ದಾರೆ .

ಲಂಡನ್​​​ನ ಪ್ರತಿಷ್ಟಿತ ಆಸ್ಪತ್ರೆಯ ಹೊರಭಾಗದಲ್ಲಿ ಮಾಸ್ಕ್​ ಧರಿಸದೇ ಜನತೆ ಪ್ರತಿಭಟನೆ ನಡೆಸಿದ್ದು ಆಸ್ಪತ್ರೆ ವೈದ್ಯರನ್ನ ಕೆರಳುವಂತೆ ಮಾಡಿದೆ. ಪ್ರತಿಭಟನೆಯ ಸಣ್ಣ ವಿಡಿಯೋವೊಂದು ವೈರಲ್​ ಆಗಿದ್ದು 4.7 ಮಿಲಿಯನ್​ಗೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.

ಡಾ. ಮಾಥ್ಯೂ ಲೀ ಎಂಬವರು ಕೋವಿಡ್​ ಒಂದು ವಂಚನೆ ಎಂಬ ಪ್ರತಿಭಟನೆ ವಿಡಿಯೋ ಶೇರ್​ ಮಾಡಿದ್ದಾರೆ. ಇದರಲ್ಲಿ ನೂರಕ್ಕೂ ಹೆಚ್ಚು ವ್ಯಕ್ತಿಗಳು ಮಾಸ್ಕ್​ ಧರಿಸದೇ ಒಂದೆಡೆ ಸೇರಿರೋದನ್ನ ನೋಡಬಹುದಾಗಿದೆ. ಈ ವಿಡಿಯೋ ಪೋಸ್ಟ್​ ಮಾಡಿರುವ ವೈದ್ಯ, ಆಸ್ಪತ್ರೆ ಒಳಗಡೆ ಕೊರೊನಾದಿಂದಾಗಿ ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥರು ಸಾಯುತ್ತಿದ್ದಾರೆ. ಇಷ್ಟಾದರೂ ಸಹ ಜನತೆಗೆ ಕೊರೊನಾ ಗಂಭೀರತೆ ಅರ್ಥ ಆಗಿಲ್ವಾ..? ಎಂದು ಪ್ರಶ್ನೆ ಮಾಡಿದ್ದಾರೆ.

— Matthew Lee (@mbklee_) January 1, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...