
ಲಂಡನ್ನ ಪ್ರತಿಷ್ಟಿತ ಆಸ್ಪತ್ರೆಯ ಹೊರಭಾಗದಲ್ಲಿ ಮಾಸ್ಕ್ ಧರಿಸದೇ ಜನತೆ ಪ್ರತಿಭಟನೆ ನಡೆಸಿದ್ದು ಆಸ್ಪತ್ರೆ ವೈದ್ಯರನ್ನ ಕೆರಳುವಂತೆ ಮಾಡಿದೆ. ಪ್ರತಿಭಟನೆಯ ಸಣ್ಣ ವಿಡಿಯೋವೊಂದು ವೈರಲ್ ಆಗಿದ್ದು 4.7 ಮಿಲಿಯನ್ಗೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.
ಡಾ. ಮಾಥ್ಯೂ ಲೀ ಎಂಬವರು ಕೋವಿಡ್ ಒಂದು ವಂಚನೆ ಎಂಬ ಪ್ರತಿಭಟನೆ ವಿಡಿಯೋ ಶೇರ್ ಮಾಡಿದ್ದಾರೆ. ಇದರಲ್ಲಿ ನೂರಕ್ಕೂ ಹೆಚ್ಚು ವ್ಯಕ್ತಿಗಳು ಮಾಸ್ಕ್ ಧರಿಸದೇ ಒಂದೆಡೆ ಸೇರಿರೋದನ್ನ ನೋಡಬಹುದಾಗಿದೆ. ಈ ವಿಡಿಯೋ ಪೋಸ್ಟ್ ಮಾಡಿರುವ ವೈದ್ಯ, ಆಸ್ಪತ್ರೆ ಒಳಗಡೆ ಕೊರೊನಾದಿಂದಾಗಿ ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥರು ಸಾಯುತ್ತಿದ್ದಾರೆ. ಇಷ್ಟಾದರೂ ಸಹ ಜನತೆಗೆ ಕೊರೊನಾ ಗಂಭೀರತೆ ಅರ್ಥ ಆಗಿಲ್ವಾ..? ಎಂದು ಪ್ರಶ್ನೆ ಮಾಡಿದ್ದಾರೆ.
— Matthew Lee (@Mattbklee) January 1, 2021