ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ದ ವೇಳೆ ಸಾಕಷ್ಟು ವಿಚಿತ್ರ ಘಟನೆಗೆ ಅಮೆರಿಕ ಸಾಕ್ಷಿಯಾಗಿದೆ. ಅದು ಟ್ರಂಪ್ರಿಂದಲೇ ಆಗಿರಬಹುದು ಇಲ್ಲವೇ ಟ್ರಂಪ್ ಬೆಂಬಲಿಗರಿಂದಲೂ ಇರಬಹುದು. ಇದೀಗ ಟ್ರಂಪ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. ಮಾತ್ರವಲ್ಲದೇ ಈ ಅಧಿಕಾರವನ್ನ ಜೋ ಬಿಡೆನ್ ವಹಿಸಿಕೊಂಡಿದ್ದಾರೆ. ಆದರೆ ಟ್ರಂಪ್ ಬೆಂಬಲಿಗರ ವಿಚಿತ್ರ ನಡವಳಿಕೆ ಕೊನೆಯಾಗೋ ಹಾಗೆ ಕಾಣ್ತಿಲ್ಲ.
ಪೌಲ್ ಡೇವಿಸ್ ಎಂಬ ಹೆಸರಿನ ಟ್ರಂಪ್ ಬೆಂಬಲಿಗನೊಬ್ಬ ಇದೀಗ ಪೂರ್ವಭಾವಿ ಮೊಕದ್ದಮೆಯೊಂದನ್ನ ಹೂಡಿದ್ದಾರೆ. ಮತದಾನದಲ್ಲಿ ಅಕ್ರಮ ನಡೆದಿದೆ ಎಂಬ ಆಧಾರದ ರಹಿತ ಆರೋಪವನ್ನೇ ಮುಂದಿಟ್ಟುಕೊಂಡು ಈ ಮೊಕದ್ದಮೆ ಹೂಡಲಾಗಿದೆ.
ಗಡಿಯಲ್ಲಿ ಮತ್ತೆ ಕ್ಯಾತೆ ತೆಗೆದ ಚೀನಾಗೆ ಮತ್ತೊಂದು ಬಿಗ್ ಶಾಕ್: ಟಿಕ್ ಟಾಕ್ ಸೇರಿ 59 ಆಪ್ ಗಳಿಗೆ ಶಾಶ್ವತ ನಿಷೇಧ
54 ಪುಟಗಳ ದಾಖಲೆಯಲ್ಲಿ ಅರ್ಥವಿಲ್ಲದ ಬೇಡಿಕೆಗಳನ್ನ ಇಟ್ಟಿದ್ದಾನೆ. ಇದರಲ್ಲಿ ಒಂದು ಫೇಸ್ಬುಕ್ ಸ್ಥಾಪಕ ಹಾಗೂ ಸಿಇಒ ಮಾರ್ಕ್ ಜುಕರ್ ಬರ್ಗ್ರನ್ನ ರಾಜಕೀಯಕ್ಕೆ ಬರಲು ಬಿಡಬೇಡಿ ಎಂದಾಗಿದೆ. ಡೇವಿಸ್ ಸೋಶಿಯಲ್ ಮೀಡಿಯಾ ವೇದಿಕೆಯ ಮುಖ್ಯಸ್ಥನಿಗೆ ಮಾತ್ರವಲ್ಲದೇ ಕೆಲ ಸೆನೆಟ್ನ ಕೆಲ ನಾಯಕರನ್ನೂ ಬ್ಯಾನ್ ಮಾಡುವಂತೆ ಕೇಳಿದ್ದಾನೆ.